ಮೈಸೂರು, ಅರಮನೆ ಆವರಣದಲ್ಲಿ ಆನೆ ಸಫಾರಿ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

Elephant

ಮೈಸೂರು, ಆ.23- ಅರಮನೆ ಆವರಣದಲ್ಲಿ ಪ್ರವಾಸಿಗರಿಗೆ ಆನೆ ಸಫಾರಿಯನ್ನು ಬಂದ್ ಮಾಡಲಾಗಿದೆ.   ರಾಜಮಾತೆ ಪ್ರಮೋದಾದೇವಿಯವರು ಸ್ವತಃ ಈ ನಿರ್ಧಾರ ಕೈಗೊಂಡಿದ್ದಾರೆ. ರಾಜಮನೆತನಕ್ಕೆ ಪ್ರೀತಿ, ಸೀತಾ, ರೂಬಿ, ರಾಜ ಮತ್ತು ಚಂಚಲಾ ಎಂಬ ಐದು ಆನೆಗಳ ಉಸ್ತುವಾರಿ ವಹಿಸಿಕೊಂಡಿದ್ದು, ಇದರಲ್ಲಿ ಪ್ರತಿದಿನ ಎರಡು ಆನೆಗಳನು ಪ್ರವಾಸಿಗರ ಸಫಾರಿಗಾಗಿ ಬಳಸಲಾಗುತ್ತಿತ್ತು. ಆದರೆ, ಕಳೆದ 15 ದಿನಗಳ ಹಿಂದೆ ಆನೆಯೊಂದು ಚೇಷ್ಟೆ ಮಾಡಿದ ಹಿನ್ನೆಲೆಯಲ್ಲಿ ಅದರ ಮಾವುತ ಚೆನ್ನಾಗಿ ಅದಕ್ಕೆ ಹೊಡೆದಿದ್ದ. ಇದರಿಂದ ಅದು ಅಸ್ವಸ್ಥಗೊಂಡಿತ್ತು. ಇದು ಪ್ರಮೋದಾದೇವಿಯವರ ಗಮನಕ್ಕೆ ಬರುತ್ತಿದ್ದಂತೆಯೇ ಸಿಸಿಟಿವಿ ಕ್ಯಾಮೆರಾದಿಂದ ಚಿತ್ರ ವೀಕ್ಷಿಸಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರವಾಸಿಗರೊಬ್ಬರು ಆನೆಗೆ ಹೊಡೆಯುತ್ತಿದ್ದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ನಂತರ ಯದುವೀರ ಅವರಿಗೆ ಮೊಬೈಲ್ ಮೂಲಕ ವಾಟ್ಸಪ್ನಲ್ಲಿ ಚಿತ್ರ ಕಳುಹಿಸಿದ್ದರು ಎಂದು ಕೂಡ ಹೇಳಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin