ಮೈಸೂರು ಎಸ್ಪಿಯಾಗಿ ರವಿ ಡಿ.ಚೆನ್ನಣ್ಣನವರ್ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Rav-i

ಬೆಂಗಳೂರು, ಆ.23-ಮೂವರು ಐಪಿಎಸ್ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದ್ದು, ಶಿವಮೊಗ್ಗದಲ್ಲಿದ್ದ ಎಸ್ಪಿ ರವಿ ಡಿ.ಚೆನ್ನಣ್ಣನವರ್ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರವಿ ಡಿ.ಚೆನ್ನಣ್ಣನವರ್ ವರ್ಗಾವಣೆ ವಿಷಯ ತಿಳಿದಾಗ ಭಾವುಕನಾಗಿದ್ದೆ. ಆದರೂ ಒಂದೂವರೆ ವರ್ಷ ಉತ್ತಮವಾಗಿ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ. ನನ್ನ ವರ್ಗಾವಣೆಯಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಹೇಳಿದರು. ಮೂರು ದಿನಗಳೊಳಗೆ ಮೈಸೂರು ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲಾಗುವುದು. ವಿಶ್ವವಿಖ್ಯಾತ ದಸರಾಗೆ ಸಂಬಂಧಿಸಿದಂತೆ ಬಿಗಿ ಭದ್ರತೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin