ಮೈಸೂರು ಕೇಂದ್ರ ಕಾರಾಗೃಹದಿಂದ 55 ಮಂದಿ ಬಿಡುಗಡೆಗೆ ಅಂಕಿತ

ಈ ಸುದ್ದಿಯನ್ನು ಶೇರ್ ಮಾಡಿ

Mysuru

ಬೆಂಗಳೂರು, ಆ.12-  ಕೇಂದ್ರ ಕಾರಾಗೃಹದಿಂದ 18 ಮಹಿಳೆಯರು ಸೇರಿದಂತೆ 55 ಮಂದಿಯನ್ನು ಬಿಡುಗಡೆ ಮಾಡಲು ರಾಜ್ಯಪಾಲರ ಅಂಕಿತ  ದೊರೆತಿದೆ. ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ 14 ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿ 10 ವರ್ಷ ಪೂರೈಸಿದವರು ಹಾಗೂ ಸನ್ನಡತೆಯುಳ್ಳವರು ಮತ್ತು ಕೆಲವು ಅಂಶಗಳನ್ನು ಒಳಗೊಂಡ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.  ಈ ಪಟ್ಟಿಯಲ್ಲಿನ 55 ಮಂದಿ ಬಿಡುಗಡೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎನ್ನಲಾಗಿದ್ದು, ಇವರನ್ನು ಆ.15ರಂದು ಬಿಡುಗಡೆಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin