ಮೈಸೂರು ಚಾಮುಂಡೇಶ್ವರಿ ದೇವಾಲಯದ ಆದಾಯ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

Chamundeshwari

ಮೈಸೂರು, ಮೇ 1- ಶ್ರೀ ಚಾಮುಂಡೇಶ್ವರಿ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗಿದ್ದು, 2015-16ರಲ್ಲಿ 21.74 ಕೋಟಿ ಆದಾಯ ಬಂದಿದ್ದು, 2016-17ರಲ್ಲಿ 24.09 ಕೋಟಿ ಆದಾಯ ಬಂದಿದೆ. ಇದರಿಂದ ಒಟ್ಟು 2.35 ಕೋಟಿ ರೂ. ಆದಾಯದಲ್ಲಿ ಹೆಚ್ಚಳ ಕಂಡಿದೆ. ದೇವಸ್ಥಾನದ ಹುಂಡಿಗಳಲ್ಲಿ 9,17,66.587 ರೂ., ವಿಶೇಷ ಪ್ರವೇಶ ಶುಲ್ಕದಿಂದ 2,41,08,066ರೂ., ಡಿಡಿ ಮತ್ತು ಧನಾದೇಶದಿಂದ 3,30,364ರೂ., ಅತಿಥಿಗೃಹದ ಬಾಡಿಗೆಯಲ್ಲಿ ಕುಸಿತ ಉಂಟಾಗಿದ್ದು, ಕೇವಲ 3,96,300ರೂ. ಆದಾಯ ಬಂದಿದೆ.  ಮಳಿಗೆಗಳ ಬಾಡಿಗೆಯಿಂದ 10,07,674ರೂ., ವಿವಿಧ ಬ್ಯಾಂಕುಗಳ ಉಳಿತಾಯ ನಿಧಿಯಿಂದ 49,92,534ರೂ. ಹಾಗೂ ಶಾಲಾ ಕಟ್ಟಡ ಬಾಡಿಗೆಯಿಂದ 20ಸಾವಿರ ರೂ. ಆದಾಯ ಬಂದಿದೆ.  ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 2.35 ಕೋಟಿ ಹೆಚ್ಚಳ ಲಾಭ ಬಂದಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  



Facebook Comments

Sri Raghav

Admin