ಮೈಸೂರು ಜಿಲ್ಲೆಯಾದ್ಯಂತ ತಿನ್ನರ್ (ಮಸಿ ಅಳಿಸುವ ದ್ರವ) ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Thinner--01

ಮೈಸೂರು, ಮೇ 12- ಮಸಿ ಅಳಿಸುವ ದ್ರವ (ತಿನ್ನರ್) ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ಜಿಲ್ಲೆಯಾದ್ಯಂತ ನಿಷೇಧಿಸಿ ಅಂಕಿತ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಅಪರಾಧಿಕಗಳು, ಬಾಲಾಪರಾಧಿಗಳು ಮಸಿ ಅಳಿಸುವ ದ್ರವವನ್ನು ಸೇವಿಸಿ ಕಿಕ್ ಏರಿಸಿಕೊಳ್ಳುತ್ತಿದ್ದು, ಇದನ್ನು ನಿಷೇಧಿಸುವಂತೆ ಪೊಲೀಸರು ನೀಡಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಮಸಿ ಅಳಿಸುವ ದ್ರವವನ್ನು ಸೇವಿಸಿದ್ದಾಗಿ ಆರೋಪಿಗಳು ಹಲವು ಪ್ರಕರಣಗಳಲ್ಲಿ ಮಾಹಿತಿ ನೀಡಿದ್ದರು.


ಇದರ ಸೇವನೆ ಆರೋಗ್ಯಕ್ಕೆ ಹಾನಿಕರವಾಗುವುದರ ಜತೆಗೆ ಆರೋಪ ಪ್ರಕರಣಗಳನ್ನು ತಗ್ಗಿಸಲು ಉದ್ದೇಶದಿಂದ ಇಂತಹ ನಿರ್ಧಾರ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳ ಉತ್ಪಾದನೆ ಮತ್ತು ಮಾರಾಟಗಳನ್ನು ಪೆನ್ನಿನ ರೂಪದಲ್ಲಿರುವುದನ್ನು ಮಾರಾಟ ಮಾಡಬಹುದು. ಆದರೆ, ಬಾಟಲ್‍ಗಳಲ್ಲಿ, ಡಬ್ಬಿಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿರುವುದಾಗಿ ಅಂಕಿತ ಅಧಿಕಾರಿಗಳಾದ ಡಾ.ಚಿದಂಬರ ಮತ್ತು ಡಾ.ಪುಷ್ಪ ಅವರು ತಿಳಿಸಿದ್ದಾರೆ. ಅಲ್ಲದೆ ಮಸಿ ಅಳಿಸುವ ದ್ರವವನ್ನು ಪೆನ್ನುಗಳ ರೂಪಗಳಲ್ಲಿ ಮಾರಾಟ ಮಾಡಬಹುದು. ಆದರೆ, ಅದರ ಮೇಲೆ ಕಡ್ಡಾಯವಾಗಿ ಇದರ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು ನಮೂದಿಸಬೇಕು. ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin