ಮೈಸೂರು ಡಿಸಿ ಶಿಖಾ ಸೇರಿ 11 ಐಎಎಸ್ ಅಧಿಕಾರಿಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

IAS

ಬೆಂಗಳೂರು ಆ.10 – ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ ಹಾಗೂ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಕೆ. ಮರಿಗೌಡ ಢಮ್ಕಿಯಿಂದ ರಾಜ್ಯದದ್ಯಾಂತ ಭಾರೀ ಸದ್ದು ಮಾಡಿದ್ದ ಮೈಸೂರು ಜಿಲ್ಲಾಧಿಕಾರಿ ಸಿ.ಸಿಖಾ ಅವರನ್ನು ಎತ್ತಂಗಡಿ ಮಾಡಲಾಗಿದೆ.  ಡಿ.ರಣದೀಪï ನೂತನ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ರಾಜ್ಯ ಸರ್ಕಾರ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿದೆ.  ಮಂಗಳವಾರವಷ್ಟೇ ಮರಿಗೌಡನನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಪಡಿಸಲಾಗಿತ್ತು. ಇದರ ಬೆನ್ನಲ್ಲೇ ಬುಧವಾರ ರಾಜ್ಯ ಸರ್ಕಾರ ಸಿ. ಸಿಖಾ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಕಳೆದ ಮೂರು ವರ್ಷಗಳಿಂದ ಮೈಸೂರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸಿಖಾ ಖಡಕ್ ಅಧಿಕಾರಿ ಎಂದೇ ಐಎಎಸ್ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.ಇತ್ತೀಚಿಗೆ ತಹಶೀಲ್ದಾರ್ ವರ್ಗಾವಣೆ ವಿಷಯದಲ್ಲಿ ಮರಿಗೌಡ ಹಾಗೂ ಸಿಖಾ ನಡುವೆ ಮುಖ್ಯಮಂತ್ರಿ ಸಮ್ಮುಖದಲ್ಲೇ ಮಾತಿನ ಚಕಮಕಿ ನಡೆದಿತ್ತು.  ತಹಶೀಲ್ದಾರ್ ಅವರನ್ನು ಸಮರ್ಥಿಸಿಕೊಂಡ ಕಾರಣ ಮರಿಗೌಡ ಜಿಲ್ಲಾಧಿಕಾರಿಗೆ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಸಿಖಾ ಮೈಸೂರಿನ ನಜೀರಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ದೂರು ದಾಖಲಿಸಿದ್ದ ಪೊಲೀಸರು ಈತನ ಬಂಧನಕ್ಕೆ ಬಲೆ ಬಿಸಿದ್ದರು. ಆದರೆ ಆಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ.ಮೈಸೂರಿನ ಜಲ್ಲಾ ನ್ಯಾಯಾಲಯ ಹಾಗೂ ಹೈ ಕೋರ್ಟ್ ಜಾಮೀನು ನೀಡಲು ನಿರಕಾರಿಸಿತ್ತು.ಸಿದ್ದರಾಮಯ್ಯನವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಹಠತ್ ನಿಧನರಾಗಿದ್ದ ವೇಳೆ ಅಂತ್ಯಸಂಸ್ಕ್ರಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದ.

ಮೊದಲು ಪೊಲೀಸರಿಗೆ ಶರಣಾಗಬೇಕು. ಬಳಿಕ ಜಾಮೀನು ನೀಡುವ ಬಗ್ಗೆ ತೀರ್ಮಾನಿಸಲಾಗುವುದೆಂದು ಹೈ ಕೋರ್ಟ್ ತೀರ್ಪು ನೀಡಿ ಅರ್ಜಿಯನ್ನು ವಜಾ ಮಾಡಿತ್ತು.ಹೀಗೆ ಎಲ್ಲ ನ್ಯಾಯಾಲಯಗಳಲ್ಲಿ ಜಾಮೀನು ಸಿಗದ ಕಾರಣ , ವಿಧಿಯಿಲ್ಲದೆ ಮರಿಗೌಡ ಪೊಲೀಸರಿಗೆ ಶರಣಾಗಿದ್ದ.  ಈ ಪ್ರಕರಣ ರಾಜ್ಯದದ್ಯಾಂತ ಭಾರೀ ವಿವಾದ ಸೃಷ್ಟಿಸಿದ ಕಾರಣ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ , ಮರಿಗೌಡನನ್ನು ಮಂಗಳವಾರ ಆರು ವರ್ಷಗಳ  ಕಾಲ ಅಮಾನತುಪಡಿಸಿದ್ದರು. ಬುಧವಾರ ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ.
ಕೆ.ಶಿಖಾ- ಆಯುಕ್ತರು ಸಮಾಜ ಕಲ್ಯಾಣ ಇಲಾಖೆ
ಅಜೇಯ ನಾಗಭೂಷಣï- ಆಯುಕ್ತರು, ಆಹಾರ ಇಲಾಖೆ
ಡಿ.ರಣದೀಪ್- ಮೈಸೂರು ಜಿಲ್ಲಾಧಿಕಾರಿ
ಎಂ.ವಿ ಸಾವಿತ್ರಿ – ವ್ಯವಸ್ಥಾಪಕ ನಿದೇರ್ಶಕರು ಕೆಎಸ್‍ಎಸ್‍ಐಡಿಸಿ
ಮನೋಜï ಜೈನ್- ಎಂಡಿ, ಆಹಾರ ನಿಗಮ
ಜೀಯಾವುಲ್ಲಾ- ಮಂಡ್ಯ ಜಿಲ್ಲಾಧಿಕಾರಿ
ಕೆಬಿ ಶಿವಕುಮಾರï- ವಿಜಯಪುರ ಜಿಲ್ಲಾಧಿಕಾರಿ
ಖುಷ್ಬೂ ಗೋಯಲï- ಯಾದಗಿರಿ ಜಿಲ್ಲಾಧಿಕಾರಿ
ರಮಣದೀಪï ಚೌಧರಿ- ಹೆಚ್ಚುವರಿ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ
ಎಚ್.ಆರ್. ಮಹದೇವ್- ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ
ಎಂಜಿ ಹಿರೇಮಠ್- ವ್ಯವಸ್ಥಾಪಕ ನಿದೇರ್ಶಕರು . ಹು-ಧಾ, ಬಿಆರ್‍ಟಿಎಸ್

Facebook Comments

Sri Raghav

Admin