ಮೈಸೂರು ದಸರಾ ಆಕರ್ಷಣೆಗಳಲ್ಲೊಂದಾದ ಆಹಾರ ಮೇಳಕ್ಕೆ ಅ.1ರಂದು ಸಿಎಂ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Dasara

ಮೈಸೂರು, ಸೆ.29- ದಸರಾ ಮಹೋತ್ಸವದ ಆಕರ್ಷಣೆಗಳಲ್ಲಿ ಒಂದಾದ ಆಹಾರ ಮೇಳಕ್ಕೆ ಅ. 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅ.1ರಿಂದ 9ರವರೆಗೆ ನಗರದ ಭಾರತ್ ಸ್ಕೌಟ್ಸ್-ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಆಹಾರ ಮೇಳದಲ್ಲಿ 92 ಮಳಿಗೆಗಳನ್ನು ತೆರೆಯಲಿದ್ದು, ಆ ಪೈಕಿ 24 ಮಳಿಗೆಗಳು ಮಾಂಸಹಾರಿಯಾಗಿದ್ದು ಉಳಿದವುಗಳು ಸಸ್ಯಹಾರಿ ಮಳಿಗೆಗಳಾಗಿರುತ್ತವೆ. ಆಹಾರ ಮೇಳದದಲ್ಲಿ ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಸಾರ್ವಜನಿಕರಿಗೆ ಉತ್ತರ ಭಾರತ, ದಕ್ಷಿಣ ಭಾರತ, ಕರಾವಳಿ ಶೈಲಿಯ ಭಕ್ಷ್ಯ ಭೋಜನಗಳು ದೊರೆಯಲಿವೆ.

ಇದೇ ಸಂದರ್ಭದಲ್ಲಿ ವೀರ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಈ ಬಾರಿಯ ಆಹಾರ ಮೇಳದಲ್ಲಿ ಶುದ್ಧ ಆಹಾರ ಪ್ರತಿಯೊಬ್ಬರ ಹಕ್ಕು ಎಂಬ ಸಂದೇಶ ಸಾರುವ ಆಶಯ ಹೊಂದಲಾಗಿದೆ. ಸಂಜೆ ಸಾಂಸ್ಕøತಿಕ ಸ್ಪರ್ಧೆಗಳು ಕೂಡ ನಡೆಯಲಿವೆ. ಸಾಮಾಜಿಕ ಸೂಕ್ಷ್ಮ ಕಾರಣಗಳಿಂದಾಗಿ ಆಹಾರ ಮೇಳದಲ್ಲಿ ಹಂದಿ-ದನದ ಮಾಂಸದ ಆಹಾರವನ್ನು ನಿಷೇಧಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರಾಮೇಶ್ವರಪ್ಪ ತಿಳಿಸಿದ್ದಾರೆ. ಮೇಳದಲ್ಲಿ ಅಕ್ಟೋಬರ್ 2ರಿಂದ 8ರವರೆಗೆ ನಮ್ಮ ಆಹಾರ, ನಮ್ಮ ಭವಿಷ್ಯ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದ್ದು, ಅ.2ರಂದು ಅನ್ನಭಾಗ್ಯ ಯೋಜನೆ, ಹಸಿವು ಮುಕ್ತ ಕರ್ನಾಟಕದ ಕನಸು, 3ರಂದು ಪರಿಶುದ್ಧ ಆಹಾರ ಪ್ರತಿಯೊಬ್ಬರ ಹಕ್ಕು, 4ರಂದು ಮಕ್ಕಳ ಆಹಾರದಲ್ಲಿ ಮಹಿಳೆಯರ ಪಾತ್ರ, 5ರಂದು ಕ್ಷೀರಭಾಗ್ಯ ಮತ್ತು ಶಿಕ್ಷಣದ ಉನ್ನತಿ, 6ರಂದು ಜನಪದ ಆಹಾರ ಪದ್ಧತಿಗಳ ಪ್ರಸ್ತುತೆ, 7ರಂದು ಪರಿಶುದ್ಧ ನೀರು, 8ರಂದು ಸಮಕಾಲೀನ ಆಹಾರ ಅಭ್ಯಾಸಗಳ ಹಾಗುಹೋಗುಗಳ ಕುರಿತು ವಿಷಯ ತಜ್ಞರ ವಿಷಯ ಮಂಡಳಿಯಿಂದ ಸಂವಾದ ನಡೆಯಲಿದೆ.

7ರಿಂದ 9ರವರೆಗೆ ಸವಿ ಭೋಜನ ಸ್ಪರ್ಧೆ ನಡೆಯಲಿದ್ದು, 7ರಂದು ಮೊಟ್ಟೆ ಇಡ್ಲಿ ತಿನ್ನುವ ಸ್ಪರ್ಧೆ, 8ರಂದು ಜುಲೇಬಿ, ಮೈಸೂರು ಪಾರ್ಕ್ ತಿನ್ನುವ ಸ್ಪರ್ಧೆ, 9ರಂದು ಆಹಾರ ಕುರಿತು ರಸಪ್ರಶ್ನೆ ನಡೆಯಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin