ಮೈಸೂರು ದಸರಾ…ಎಷ್ಟೊಂದು ಸುಂದರ

ಈ ಸುದ್ದಿಯನ್ನು ಶೇರ್ ಮಾಡಿ

Dasara 2015

ಮೈಸೂರು,ಅ.10- ಜಗತ್ ವಿಖ್ಯಾತ ಜಂಬೂ  ಸವಾರಿಗೆ  ಅರಮನೆ ನಗರಿ ಸಜ್ಜಾಗಿದೆ.  ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ಮಧ್ಯಾಹ್ನ 2.45ಕ್ಕೆ ಚಾಲನೆ ನೀಡಲಿದ್ದಾರೆ.750 ಕೆಜಿ ತೂಕದ ಬಂಗಾರದ ಅಂಬಾರಿಯಲ್ಲಿ ಬರುವ ನಾಡ ದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಜೆ 4.45ಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ.  6ನೇ ಬಾರಿ ಅರ್ಜುನ ಅಂಬಾರಿ ಹೊರಲಿದ್ದಾನೆ. ಈತನ ಜತೆ ಅಭಿಮನ್ಯು, ಬಲರಾಮ, ವಿಕ್ರಮ, ವಿಜಯ, ಕಾವೇರಿ, ಗಜೇಂದ್ರ, ಗೋಪಾಲಕೃಷ್ಣ, ದುರ್ಗಾಪರಮೇಶ್ವರಿ, ಗೋಪಿ, ಪ್ರಕಾಶ್ ಹೆಜ್ಜೆ ಹಾಕಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಅರಮನೆಯ ಉತ್ತರ ದ್ವಾರದಲ್ಲಿ ನಂದಿ ದ್ವಜದ ಪೂಜೆ ನಡೆಯಲಿದೆ. ಈ ಬಾರಿ 42 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. 30 ಜಿಲ್ಲೆಗಳ ವಿವಿಧ ಸ್ತಬ್ಧಚಿತ್ರಗಳು ಹಾಗೂ ಹೊರ ರಾಜ್ಯಗಳ ಸ್ತಬ್ಧ ಚಿತ್ರಗಳು ಕೂಡ ದಸರಾ ಮೆರವಣಿಗೆಯಲ್ಲಿ ಕಂಗೊಳಿಸಲಿವೆ.

ರಾಜ್ಯ ಹಾಗೂ ವಿವಿಧ ರಾಜ್ಯಗಳ 50 ಜಾನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಯಲ್ಲಿ ಮೆರಗು ಹೆಚ್ಚಿಸಲಿದೆ. ಮೈಸೂರು ಮೇಯರ್ ಬೈರಪ್ಪ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯೀಮ್ ಸುಲ್ತಾನ್ ಅವರು ಕುದುರೆ ಮೇಲೆ ಬರಲಿರುವುದು ವಿಶೇಷ ಆಕರ್ಷಣೆಯಾಗಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಮಹದೇವಪ್ರಸಾದ್, ಶಿಕ್ಷಣ ಸಚಿವ ತನ್ವೀರ್‍ಸೇಠ್, ಜಿಲ್ಲಾಧಿಕಾರಿ ರಂದೀಪ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

  • ಜಂಬೂಸವಾರಿಗೆ ಬಾರೀ ಭದ್ರತೆ

Mysuru

ಮೈಸೂರು,ಅ.10- ನಾಳೆ ನಡೆಯಲಿರುವ ವಿಶ್ವವಿಖ್ಯಾತ ಜಂಬೂಸವಾರಿಗೆ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಜಂಬೂಸವಾರಿ ಸಾಗುವ ಮಾರ್ಗದುದ್ದಕ್ಕೂ ಸಿಸಿ ಕ್ಯಾಮೆರಾಗಳ ಕಣ್ಗಾವಲು ಇಡಲಾಗಿದೆ. ಇತ್ತೀಚೆಗೆ ಮೈಸೂರಿನ ಕೋರ್ಟ್ ಆವರಣದಲ್ಲಿ ಬಾಂಬ್‍ಸ್ಫೋಟ ಪ್ರಕರಣ ನಡೆದಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು. ಭಯೋತ್ಪಾದಕ ನಿಗ್ರಹದಳ ಕೂಡ ಇಲ್ಲಿ ಬೀಡುಬಿಟ್ಟಿದೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಮಾರ್ಗದುದ್ದಕ್ಕೂ 1300 ಪೊಲೀಸರನ್ನು ನಿಯೋಜಿಸಲಾಗಿದೆ. ಅರಮನೆ ಆವರಣದಲ್ಲಿ 1200 ಪೆÇಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಂಜೆ ನಡೆಯುವ ಪಂಜಿನ ಕವಾಯತು ಭದ್ರತೆಗೆ 1100 ಪೊಲೀಸರು ನಿಯೋಜನೆಗೊಂಡಿದ್ದಾರೆ.

ಜಂಬೂಸವಾರಿ ಮೆರವಣಿಗೆ ದಿನದಂದು ಐವರು ಎಸ್ಪಿ, 20 ಎಸಿಪಿ, 30 ಇನ್ಸ್‍ಪೆಕ್ಟರ್, 70 ಎಸ್‍ಐ, 1075 ಹೋಂಗಾರ್ಡ್‍ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಜಂಬೂಸವಾರಿ ಮಾರ್ಗದಲ್ಲಿ ಇಬ್ಬರು ಎಸ್ಪಿ, 6 ಎಸಿಪಿ ಮೂವರು ಇನ್ಸ್‍ಪೆಕ್ಟರ್, 150 ಸಬ್‍ಇನ್ಸ್‍ಪೆಕ್ಟರ್, 450 ಪೆÇಲೀಸ್ ಸಿಬ್ಬಂದಿ, 100 ಮಹಿಳಾ ಸಿಬ್ಬಂದಿ, 400 ಹೋಂಗಾಡ್ರ್ಸ್‍ಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ 42 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಹೆಚ್ಚುವರಿಯಾಗಿ 47 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

  • ಮಹಾರಾಜರಿಂದ ಆಯುಧಪೂಜೆ

Ayudha-pooja

ಮೈಸೂರು,ಅ.10- ಆಯುಧಪೂಜೆ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಶಾಸ್ತ್ರೋಕ್ತವಾಗಿ ಆಯುಧಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಇಂದು ಬೆಳಗ್ಗೆ 6.15ಕ್ಕೆ ಕಲ್ಯಾಣಮಂಟಪದ ಬಳಿ ಚಾಮುಂಡಿ ಹೋಮ ಮಾಡಲಾಯಿತು. 6.30ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಪಟ್ಟದ ಆನೆ, ಹಸು, ಕುದುರೆಗಳನ್ನು ಆನೆ ಬಾಗಿಲಿಗೆ ಕರೆತರಲಾಯಿತು. 6.50ಕ್ಕೆ ಪಟ್ಟದಕತ್ತಿ ಸೇರಿದಂತೆ ಖಾಸಾ ಆಯುಧಗಳನ್ನು ಆನೆ ಬಾಗಿಲ ಮೂಲಕ ಕೋಡಿ ಸೋಮೇಶ್ವರ ದೇವಾಸ್ಥಾನಕ್ಕೆ ಕೊಂಡೊಯ್ದು ಕಲ್ಯಾಣಮಂಟಪದಲ್ಲಿ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 9.30ಕ್ಕೆ ಯದುವೀರರು ಆಗಮಿಸಿದರು. ನಂತರ 11.30ರಿಂದ 12ರವರೆಗಿನ ಶುಭ ಧನುರ್ ಲಗ್ನದಲ್ಲಿ ಆಯುಧಪೂಜೆ ಮಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin