ಮೈಸೂರು ಪಾಲಿಕೆಯಲ್ಲಿ ಕೈ-ಕೈ ಮಿಲಾಯಿಸುವ ಹಂತ ತಲುಪಿದ ಸದಸ್ಯರ ನಡುವೆ ಗಲಾಟೆ
ಮೈಸೂರು, ಮೇ 9- ಪಾಲಿಕೆ ಸಭೆ ವೇಳೆ ಶಾಸಕ ಸೋಮಶೇಖರ್ ಹಾಗೂ ಪಾಲಿಕೆ ಸದಸ್ಯರ ನಡುವೆ ಗಲಾಟೆ ನಡೆದು ಕೈ-ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ಇಂದು ನಡೆದಿದೆ.
ಪಾಲಿಕೆಯಲ್ಲಿ ಇಂದು ನಡೆದ ನೀರಿನ ಸಮಸ್ಯೆ ಪರಿಹಾರದ ಸಭೆಯಲ್ಲಿ ಈ ಘಟನೆ ನಡೆದಿದ್ದು, ಪಾಲಿಕೆ ಸದಸ್ಯ ಕೆಂಪಣ್ಣ ಅವರು ಪಾಲಿಕೆಯಲ್ಲಿ ಕುಳಿತು ಸಭೆ ಮಾಡಿದರೆ ಪ್ರಯೋಜನವಾಗುವುದಿಲ್ಲ. ಸ್ಥಳಕ್ಕೆ ತೆರಳಿ ನೀರು ಎಷ್ಟಿದೆ ಎಂದು ಪರಿಶೀಲಿಸಿ ನಂತರ ಮಾತುಕತೆ ನಡೆಸೋಣ ಎಂದು ಸಲಹೆ ನೀಡಿದರು. ಈ ಸಲಹೆಗೆ ಕೆಲವು ಪಾಲಿಕೆ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಆದರೆ, ಶಾಸಕ ಸೋಮಶೇಖರ್ ಅವರ ಆಪ್ತ ಕಾರ್ಯದರ್ಶಿ ಗುಣ ಮಧ್ಯ ಪ್ರವೇಶಿಸಿ ಅಲ್ಲಿ ತೆರಳುವ ಬದಲು ಇಲ್ಲೇ ಕುಳಿತು ಮಾತುಕತೆ ನಡೆಸೋಣ ಎಂದಿದ್ದಕ್ಕೆ ಬೇಸರಗೊಂಡ ಪಾಲಿಕೆ ಕೆಲವು ಪಾಲಿಕೆ ಸದಸ್ಯರು ಸಲಹೆ ನೀಡಲು ನೀನಾರು ಎಂದು ಆತನನ್ನು ತರಾಟೆಗೆ ತೆಗೆದುಕೊಂಡರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಪಾಲಿಕೆ ಸದಸ್ಯರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಸಭೆಯಲ್ಲಿ ಗದ್ದಲ ಉಂಟಾಯಿತು. ನಂತರ ಶಾಸಕರ ಪಿಎ ಗುಣ ಅವರನ್ನು ಸಭೆಯಿಂದ ಹೊರಗೆ ಕಳುಹಿಸಲಾಯಿತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS