ಮೈಸೂರು ಪಾಲಿಕೆಯ ಕಾರ್ಪೊರೇಟರ್ ಮನೆಯಲ್ಲಿ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

firing

ಮೈಸೂರು, ಸೆ.16- ಮಹಾನಗರ ಪಾಲಿಕೆಯ ವಾರ್ಡ್ ನಂ.43ರ ಕಾರ್ಪೊರೇಟರ್ ಸೋಹೆಲ್ ಬೇಗ್ ಮನೆಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.ಲಷ್ಕರ್ ಮೊಹಲ್ಲಾದಲ್ಲಿ ಸೋಹೆಲ್‍ಬೇಗ್ ಕುಟುಂಬ ವಾಸವಾಗಿದ್ದು, ಮುಂಜಾನೆ 3 ಗಂಟೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಇವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಉಪಕರಣಗಳು, ಫ್ರಿಡ್ಜ್, ಇನ್ನಿತರ ಪೀಠೋಪಕರಣಗಳು ಹೊತ್ತಿ ಉರಿದಿವೆ.

ಈ ಬೆಂಕಿಯ ಬಿಸಿ ಸೋಹೆಲ್‍ಬೇಗ್ ಹಿರಿಯ ಪುತ್ರಿಗೆ ತಾಗಿ ಎಚ್ಚರಗೊಂಡು ನೋಡಿದಾಗ ಮನೆಯಲ್ಲಿ ಬೆಂಕಿ ಆವರಿಸಿರುವುದು ಕಂಡು ತಕ್ಷಣ ತಾಯಿಯನ್ನು ಎಬ್ಬಿಸಿದ್ದಾಳೆ.ತಾಯಿಯು ತನ್ನ ನಾಲ್ವರು ಮಕ್ಕಳು ಹಾಗೂ ಪತಿಯನ್ನು ಎಬ್ಬಿಸಿ ಹೊರಗೆ ಬಂದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನೋಡನೋಡುತ್ತಿದ್ದಂತೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ತಕ್ಷಣ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin