ಮೈಸೂರು ಪಾಲಿಕೆ ಮತ್ತೆ ಜೆಡಿಎಸ್-ಬಿಜೆಪಿ ದೋಸ್ತಿ ವಶಕ್ಕೆ : ಕಾಂಗ್ರೆಸ್‍ಗೆ ಶಾಕ್

ಈ ಸುದ್ದಿಯನ್ನು ಶೇರ್ ಮಾಡಿ

Mysuru-01

ಮೈಸೂರು,ಡಿ.7- ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂರು ಮೈಸೂರು ಮಹಾನಗರ ಪಾಲಿಕೆ ಮತ್ತೆ ಜೆಡಿಎಸ್-ಬಿಜೆಪಿ ದೋಸ್ತಿ ಪಾಲಾಗಿದೆ. ರಾಜ್ಯ ರಾಜಧಾನಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಂಗ್ರೆಸ್ ಜೆಡಿಎಸ್ ನಡುವೆ ದೋಸ್ತಿ ನಡೆದ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರಿನಲ್ಲೂ ಇದೇ ರೀತಿ ನಡೆಯಬಹುದೆಂದು ಹಲವಾರು ನಿರೀಕ್ಷೆಗಳಿದ್ದವು. ಈ ನಿಟ್ಟಿನಲ್ಲಿ ಕಾಂಗ್ರೆಸ್‍ನ ಒಂದು ಬಣ ಮೇಯರ್ ಪಟ್ಟ ಗಿಟ್ಟಿಸಲು ಸಾಕಷ್ಟು ಪ್ರಯಾಸ ಪಟ್ಟಿತ್ತು.  ಆದರೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಅಧಿಕಾರ ಹಂಚಿಕೆಯಲ್ಲಿ ಸಹಮತ ವ್ಯಕ್ತವಾಗಿ ಕಾಂಗ್ರೆಸ್‍ಗೆ ಮತ್ತೆ ಶಾಕ್ ನೀಡಿದೆ.

ಇಂದು ನಡೆದ ಚುನಾವಣೆಯಲ್ಲಿ ಪಾಲಿಕೆಯ 19ನೇ ಮೇಯರ್ ಆಗಿ ಜೆಡಿಎಸ್ ಸದಸ್ಯ ಎಂ.ಕೆ.ರವಿಕುಮಾರ್ ಆಯ್ಕೆಯಾದರೆ, ಉಪಮೇಯರ್ ಆಗಿ ಬಿಜೆಪಿಯ ರತ್ನ ಲಕ್ಷ್ಮಣ್ ಆಯ್ಕೆಯಾಗಿದ್ದಾರೆ. ನಾಮಪತ್ರಗಳನ್ನು ಇಂದು ಬೆಳಗ್ಗೆ 9.30ರೊಳಗೆ ಸಲ್ಲಿಸುವಂತೆ ನಿಗದಿಪಡಿಸಲಾಗಿತ್ತು. ಮೇಯರ್ ಸ್ಥಾನಕ್ಕೆ ಜೆಡಿಎಸ್‍ನಲ್ಲಿ ಎಂ.ಕೆ.ರವಿಕುಮಾರ್ ಕಾಂಗ್ರೆಸ್ ಪಕ್ಷದಿಂದ ಜಗದೀಶ್ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ರತ್ನ ಲಕ್ಷ್ಮಣ್, ಕಾಂಗ್ರೆಸ್ ಪಕ್ಷದಿಂದ ರಜನಿ ಅಣ್ಣಯ್ಯ ನಾಮಪತ್ರ ಸಲ್ಲಿಸಿದ್ದರು. ನಂತರ ಚುನಾವಣೆ ನಡೆದು ಜೆಡ ಜೆಡಿಎಸ್‍ನ ಎಂ.ಕೆ.ರವಿಕುಮಾರ್ ಆಯ್ಕೆಯಾದರೆ, ಉಪಮೇಯರ್ ಆಗಿ ಬಿಜೆಪಿಯ ರತ್ನ ಲಕ್ಷ್ಮಣ್ ಆಯ್ಕೆಯಾದರು.

ಪಾಲಿಕೆಯ ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರಾದ ಎಂ.ವಿ.ಜಯಂತಿ ನೇತೃತ್ವದಲ್ಲಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯಿತು.
ಒಟ್ಟು 65 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 20 , ಜೆಡಿಎಸ್ 19, ಬಿಜೆಪಿ 13, ಪಕ್ಷೇತರರು 7 ಹಾಗೂ ಎಸ್‍ಟಿಪಿಐ ಮೂವರು ಸದಸ್ಯರು ಇದ್ದಾರೆ.  ಚುನಾವಣೆಯಲ್ಲಿ ಕಾಂಗ್ರೆಸ್‍ನ ಮೂವರು ಶಾಸಕರು ಹಾಗೂ ಒಬ್ಬ ವಿಧಾನಪರಿಷತ್ ಸದಸ್ಯ ಮತದಾನ ಮಾಡುವ ಹಕ್ಕು ಪಡೆದಿದ್ದರೂ ಇದರ ಜೊತೆಗೆ 7 ಪಕ್ಷೇತರರು ಹಾಗೂ ಮೂವರು ಎಸ್‍ಟಿಪಿಐ ಸದಸ್ಯರು ಕೈ ಜೋಡಿಸಿದರು. ಕೊನೆಗೆ ಇದು 34ಕ್ಕೆ ಮುಟ್ಟಿತ್ತು.

ಆದರೆ ಜೆಡಿಎಸ್‍ಗೆ ಮೂವರು ವಿಧಾನಪರಿಷತ್ ಸದಸ್ಯರು, ಒಬ್ಬ ಶಾಸಕರು ಲಭಿಸಿದ ಹಿನ್ನೆಲೆಯಲ್ಲಿ ಅವರಿಗೂ 24ರ ಬಲ ಸಿಕ್ಕಿತ್ತು. ಇವರಿಗೆ ಬಿಜೆಪಿ 13 ಮಂದಿ ಪಾಲಿಕೆ ಸದಸ್ಯರ ಜೊತೆ ಒಬ್ಬರು ಸಂಸತ್ ಸದಸ್ಯರು ಮತ ಚಲಾಯಿಸಿದ್ದರಿಂದ ಮೇಯರ್ ಆಯ್ಕೆಗೆ ಅಗತ್ಯವಾಗಿದ್ದ ಬಹುಮತ ದೊರೆಯಿತು.  ಮತ್ತೆ ಹಳೆ ದೋಸ್ತಿ ಮುಂದುವರೆದ ಹಿನ್ನಲೆಯಲ್ಲಿ ಎರಡೂ ಮಿತ್ರಪಕ್ಷಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.  ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಾಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಯಾವ ರೀತಿಯ ಅಭಿವೃದ್ದಿ ಕಾರ್ಯಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin