ಮೈಸೂರು ಮಹಾರಾಣಿಗೆ ಸೀಮಂತ , ಅರಮನೆಯಲ್ಲಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Rishika--02

ಮೈಸೂರು, ಅ.1- ಅರಮನೆಯಲ್ಲಿಂದು ಡಬಲ್ ಖುಷಿ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾಕುಮಾರಿ ತುಂಬು ಗರ್ಭಿಣಿ. ಇಂದು ಅರಮನೆಯಲ್ಲಿ ಸೀಮಂತ ಕಾರ್ಯಕ್ರಮ. ರಾಜಕುಟುಂಬದವರು, ಪರಿವಾರದವರು, ಎರಡೂ ರಾಜಮನೆತನದವರಲ್ಲೂ ಸಡಗರ ಹಾಗೂ ಸಂಭ್ರಮ.
ಸದ್ಯದಲ್ಲೇ ಆಗಮಿಸಲಿರುವ ರಾಜವಂಶದ ಕುಡಿಯನ್ನು ಸ್ವಾಗತಿಸಲು ರಾಜಮನೆತನದವರು ಕಾತುರರಾಗಿದ್ದಾರೆ. ಇಂದು ಅರಮನೆಯಲ್ಲಿ ಸಡಗರ, ಸಂಭ್ರಮದಿಂದ ಸೀಮಂತ ಕಾರ್ಯಕ್ರಮ ನೆರವೇರಿತು. ಕಳೆದ 10ದಿನಗಳಿಂದ ದಸರಾ ಆಚರಣೆ, ಖಾಸಗಿ ದರ್ಬಾರ್ ಹಾಗೂ ನಿನ್ನೆಯಷ್ಟೇ ಜಂಬೂಸವಾರಿ ಯಶಸ್ವಿಯ ಖುಷಿಯಲ್ಲಿದ್ದ ಮಹಾರಾಜ ಯದುವೀರ ಕೃಷ್ಣದತ್ತ ಚಾರಮರಾಜ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾದೇವಿ ಅವರಿಗೆ ಇಂದು ಮತ್ತೊಂದು ಸಂತಸ.

Facebook Comments

Sri Raghav

Admin