ಮೈಸೂರು ಮೃಗಾಲಯಕ್ಕೆ ಆಗಮಿಸಲಿದ್ದಾರೆ ನೂತನ ಅತಿಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Mysuru--01
ಮೈಸೂರು,ಫೆ.7– ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ನೂತನ ಅತಿಥಿಗಳ ಆಗಮನವಾಗಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲ ಕರಿಕಾಳನ್ ತಿಳಿಸಿದ್ದಾರೆ. ಪ್ರಾಣಿಗಳ ವಿನಿಮಯ ಯೋಜನೆಯಡಿ ಗುಜರಾತಿನಿಂದ ಒಂದು ಸಿಂಹ, ತಮಿಳುನಾಡಿನಿಂದ ಎರಡು ಸಿಂಗಲೀಕ, ಶ್ರೀಲಂಕದಿಂದ 6 ಹಸಿರು ಅನಕೊಂಡ ಪ್ರಾಣಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ಮೂರು ವರ್ಷದ ಸಿಂಹದ ಜತೆ ಹಿಮಾಲಯನ್ ಕರಡಿ, ತೋಳ, ಕಪ್ಪು ಹಂಸ ಹಾಗೂ ಇತರೆ ಪಕ್ಷಿಗಳನ್ನು ತರಲು ಗುಜರಾತಿನ ಸಿಕರಬಾಗ್ ಮೃಗಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.  ಚೆನ್ನೈ ಸಮೀಪವಿರುವ ವದಲೂರು ಮೃಗಾಲಯದಿಂದ ಹೆಣ್ಣು-ಗಂಡು ಸಿಂಗಲೀಕಗಳನ್ನು ಹಾಗೇಯೇ ಶ್ರೀಲಂಕದ ರಾಷ್ಟ್ರೀಯ ಮೃಗಾಲಯದಿಂದ ಅನಕೊಂಡಗಳನ್ನು ತರಿಸಿಕೊಳ್ಳಲಾಗುತ್ತಿದ್ದು ಇವುಗಳಿಗೆ ಬದಲಾಗಿ ಕೃಷ್ಣ ಮೃಗವನ್ನು ನೀಡಲಾಗುವುದು ಎಂದು ವಿವರಿಸಿದರು.

ಈ ಅತಿಥಿಗಳನ್ನು ಕಳೆದ ತಿಂಗಳೇ ಕರೆಸಿಕೊಳ್ಳಬೇಕಿತ್ತು. ಆದರೆ ಹಕ್ಕಿ ಜ್ವರದ ಭೀತಿಯಿಂದಾಗಿ ಮುಂದಿನ ತಿಂಗಳ ಮೊದಲ ವಾರದಲ್ಲಿಯೇ ಮೃಗಾಲಯಕ್ಕೆ ಪ್ರಾಣಿಗಳು ಆಗಮಿಸಲಿವೆ. ಅನಕೊಂಡ ಮತ್ತು ಹೆಬ್ಬಾವುಗಳನ್ನು ಸಾಕುತ್ತಿರುವ ಮೊದಲ ಮೃಗಾಲಯ ಶ್ರೀಚಾಮರಾಜೇಂದ್ರ ಮೃಗಾಲಯವಾಗಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin