ಮೈಸೂರು ಮೃಗಾಲಯಕ್ಕೆ ಶಿವರಾತ್ರಿ ಶ್ರೀಗಳಿಂದ 1 ಲಕ್ಷ ರೂ.ದೇಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Mysuru-zoo

ಮೈಸೂರು, ಆ.24- ಜಗದ್ಗುರು ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 102ನೇ ಜಯಂತಿ ಮಹೋತ್ಸವದ ಅಂಗವಾಗಿ ಮೃಗಾಲಯದ ಎಲ್ಲಾ ಪ್ರಾಣಿಗಳ ಒಂದು ದಿನದ ನಿರ್ವಹಣೆಯ ವೆಚ್ಚಕ್ಕಾಗಿ ಶ್ರೀಮಠದ ವತಿಯಿಂದ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ ಮೈಸೂರು ಮೃಗಾಲಯದ ಅಧಿಕಾರವರ್ಗದವರು ಭಕ್ತಿಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜಯಂತಿಯ ಅಂಗವಾಗಿ ಮೃಗಾಲಯದಲ್ಲಿನ ಪ್ರಾಣಿಗಳ ನಿರ್ವಹಣೆ ವೆಚ್ಚವನ್ನು ಶ್ರೀಮಠದ ವತಿಯಿಂದಭರಿಸಲಿದ್ದಾರೆ.

Facebook Comments

Sri Raghav

Admin