ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಈ ಸುದ್ದಿಯನ್ನು ಶೇರ್ ಮಾಡಿ

Mysuru

ಮೈಸೂರು, ಆ.21-ಇಂದು ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ರೋಸ್ಪೆಲಿಕಾನ್ ಹೆಣ್ಣು ಕಪ್ಪೆ , ಚಿರುಗ ಹಾಗೂ ಕೆಸರು ಜಿಂಕೆ ಹೊಸ ಅತಿಥಿಗಳಾಗಿ ಆಗಮಿಸಿವೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲ ಕರಿಕಾಳನ್ ತಿಳಿಸಿದ್ದಾರೆ. ಪ್ರಾಣಿಗಳ ವಿನಿಮಯ ಯೋಜನೆಯಡಿ ಲಖ್ನೌದಲ್ಲಿರುವ ನವಾಬ್ ವಾಜಿದಾಲಿ ಷಾ ಮೃಗಾಲಯದಿಂದ ಈ ಪ್ರಾಣಿಗಳನ್ನು ತರಿಸಿಕೊಳ್ಳಲಾಗಿದೆ ಎಂದ ಅವರು, ಈ ಪ್ರಾಣಿಗಳ ಕೊರತೆ ಇರುವುದರಿಂದ ಇವುಗಳ ಸಂತಾನೋತ್ಪತಿಗಾಗಿ ತರಿಸಿಕೊಳ್ಳಲಾಗಿದೆ ಎಂದು ಹೇಳಿದರು. ಮೃಗಾಲಯದಲ್ಲಿರುವ ವಲಭ ಹೆಸರಿನ ಕಾಂಗೂರು ಹಾಗೂ ಕಾಡು ಎಮ್ಮೆ ಇಂದು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಆರೋಗ್ಯವಾಗಿವೆ ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin