ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳ ಸರಣಿ ಸಾವಿನ ಸುತ್ತ ಹಲವು ಅನುಮಾನ

ಈ ಸುದ್ದಿಯನ್ನು ಶೇರ್ ಮಾಡಿ

Mysuru-zoo

ಮೈಸೂರು, ನ.29- ಇಲ್ಲಿನ ಪ್ರಸಿದ್ಧ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ಸರಣಿ ಸಾವು ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಕಳೆದ 20 ದಿನದಿಂದ ಒಂದರ ಮೇಲೊಂದರಂತೆ ಅಜೀಬ್ರಾ , ಕಾಳಿಂಗ ಸರ್ಪ, ಕಾಡೆಮ್ಮೆ, ಘೇಂಡಾಮೃಗ, ಹೆಬ್ಬಾವು, ನರಿ ಮತ್ತು ಸಿಂಗಳೀಕಾ ಮೃತಪಟ್ಟಿದ್ದು, ಮೃಗಾಲಯ ಅಧಕಾರಿಗಳು ಹಾಗೂ ಪ್ರಾಣಿ ಪ್ರಿಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಈ ರೀತಿ ಪ್ರಾಣಿಗಳು ಮೃತಪಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗುತ್ತಿದ್ದು ಮೃಗಾಲಯ ಅಧಿಕಾರಿಗಳು ಸಹ ಇದನ್ನು ಗೌಪ್ಯವಾಗಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಡುವಿನ ವೈಮನಸ್ಯದಿಂದ ಪ್ರಾಣಿಗಳಿಗೆ ಸರಿಯಾದ ಆಹಾರ ಚಿಕಿತ್ಸೆ ಸಿಗದೆ ಈ ರೀತಿಯ ಅನಾಹುತ ನಡೆಯುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಕಳೆದ ಹಲವು ದಿನಗಳ ಹಿಂದೆ ಆನೆ ಹಾಗೂ ಚಿಂಪಾಂಜಿಗೆ ವಿಷಾಹಾರ ನೀಡಲಾಗಿತ್ತು. ಆದರೆ ಅದೃಷ್ಟವಶಾತ್ ಅವು ಬದುಕಿದವು. ಇಂತಹ ಘಟನೆಗಳು ಮೃಗಾಲಯದಲ್ಲಿ ನಡೆಯುತ್ತಿರುವುದು ಎಲ್ಲರನ್ನು ಆತಂಕಕ್ಕೀಡು ಮಾಡಿದೆ. ಕೂಡಲೇ ಮನುಷ್ಯರ ನಡುವಿನ ವೈಮನಸ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin