ಮೈಸೂರು ಮೃಗಾಲಯದಲ್ಲಿ ಮತ್ತೊಂದು ಪಕ್ಷಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Mysueu-Zoo

ಮೈಸೂರು, ಡಿ.6-ಹಕ್ಕಿ ಜ್ವರ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಬಂದ್ ಆಗಿರುವ ಇಲ್ಲಿನ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯದಲ್ಲಿ ಇಂದು ಮತ್ತೊಂದು ಪಕ್ಷಿ ಸಾವನ್ನಪ್ಪಿದೆ. ಹಕ್ಕಿ ಜ್ವರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಕೈಗೊಂಡಿರುವ ನಡುವೆಯೇ ಪೆಲಿಕಾನ್ ಎಂಬ ಪಕ್ಷಿ ಸಾವನ್ನಪ್ಪಿದ್ದು, ಒಟ್ಟು ಹಕ್ಕಿ ಜ್ವರಕ್ಕೆ ಬಲಿಯಾದ ಪಕ್ಷಿಗಳ ಸಂಖ್ಯೆ 5ಕ್ಕೇರಿದೆ.
ದಿನೇ ದಿನೇ ಹಕ್ಕಿ ಜ್ವರ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಮೃಗಾಲಯದ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಲೋಚನೆ ನಡೆಸಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಪಕ್ಕದ ಕೇರಳದಲ್ಲಿ ಹಕ್ಕಿಜ್ವರ ಭೀತಿ ಎದುರಾಗಿರುವುದರಿಂದ ಮೈಸೂರಿನಲ್ಲೂ ಈ ಕಾಯಿಲೆ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಮೃಗಾಲಯವನ್ನು ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ಮಾಡಲಾಗಿದೆ. ಈ ನಡುವೆಯೂ ಪಕ್ಷಿಗಳು ಸಾವನ್ನಪ್ಪುತ್ತಿರುವುದು ಆತಂಕ ಉಂಟು ಮಾಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin