ಮೈಸೂರು ವಿವಿ ವೆಬ್ಸೈಟ್ ಹ್ಯಾಕ್ : ತನಿಖೆಗೆ ಆದೇಶಿಸಿದ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Mysuru

ಮೈಸೂರು, ಆ.28- ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವೆಬ್ಸೈಟ್ನ್ನು ಮುಸ್ಲಿಂ ಸಂಘಟನೆಯೊಂದು ಹ್ಯಾಕ್ ಮಾಡಿದೆ. ಮೈಸೂರು ವಿವಿ ವೆಬ್ಸೈಟ್ನಲ್ಲಿ ಬರ್ಮಾ ಮುಸ್ಲಿಮರನ್ನು ರಕ್ಷಿಸಿ ಇಸ್ಲಾಮಿಕ್ ಒಂದೇ ಧರ್ಮ ಎಂಬ ವಾಕ್ಯವನ್ನು ಈ ಸಂಘಟನೆ ಹಾಕಿದೆ. ಟ್ರೇಡಿಂಗ್ ಟಿಎನ್ ಎಂಬ ಸೈಬರ್ನಿಂದ ವೆಬ್ಸೈಟ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ. ವಿವಿ ವೆಬ್ಸೈಟ್ ಹ್ಯಾಕ್ ಆಗಿರುವ ವಿಷಯ ಇಂದು ಬೆಳಗ್ಗೆ ವಿಶ್ವವಿದ್ಯಾನಿಲಯ ಸಿಬ್ಬಂದಿ ಗಮನಕ್ಕೆ ಬಂದಿದ್ದು, ತಕ್ಷಣ ತಜ್ಞರ ಗಮನಕ್ಕೆ ತಂದಿದ್ದಾರೆ. ಇದೀಗ ವೆಬ್ಸೈಟ್ಅನ್ನು ಬ್ಲಾಕ್ ಮಾಡಲಾಗಿದ್ದು, ಮುಸ್ಲಿಂ ಸಂಘಟನೆಯೊಂದು ವಿದ್ಯಾರ್ಥಿಗಳನ್ನು ಆಕರ್ಷಿಸಲು ಈ ರೀತಿ ಮಾಡಿರಬಹುದೆಂಬ ಸಂಶಯ ವ್ಯಕ್ತವಾಗಿದೆ.

ತನಿಖೆಗೆ ಆದೇಶ:
ಮೈಸೂರು ವಿವಿ ವೆಬ್ಸೈಟ್ ಹ್ಯಾಕ್ ಆಗಿರುವ ಸಂಬಂಧ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುತ್ತೂರು ಮಠದ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿ ವೆಬ್ಸೈಟ್ ಹ್ಯಾಕ್ ಆಗಿರುವ ಘಟನೆ ಗಮನಕ್ಕೆ ಬಂದಿದ್ದು, ತನಿಖೆ ನಡೆಸಿ ಮುಂದಿನ ಕ್ರಮ ಜರುಗಿಸುವಂತೆ ಸೈಬರ್ ಕ್ರೈಮ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಸಂಘಟನೆ ಹ್ಯಾಕ್ ಮಾಡಿದೆಯೋ ಅಥವಾ ಯಾರಾದರೂ ವ್ಯಕ್ತಿ ಹ್ಯಾಕ್ ಮಾಡಿದ್ದಾರೆಯೋ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

Facebook Comments

Sri Raghav

Admin