ಮೈಸೂರು ಸ್ಫೋಟ ಪ್ರಕರಣ : 7 ದಿನ ಕಳೆದರೂ ಆರೋಪಿಗಳ ಸುಳಿವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Mysuru-Blast

ಮೈಸೂರು, ಆ.7-ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡು 7 ದಿನಗಳು ಕಳೆದರೂ ಸಹ ಯಾವುದೇ ಸುಳಿವು ದೊರಕದ ಹಿನ್ನೆಲೆಯಲ್ಲಿ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸುವ ಸಾಧ್ಯತೆ ಇದೆ.  ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ನಡೆದಿರುವ ಸ್ಫೋಟಕ್ಕೂ, ನಗರದಲ್ಲಿ ನಡೆದಿರುವ ಸ್ಫೋಟಕ್ಕೂ ಸಾಮ್ಯತೆ ಇರುವುದರಿಂದ ಉಗ್ರರು ಈ ಕೃತ್ಯ ಮಾಡಿರಬಹುದೆಂಬ ಸಂಶಯ ನಗರದೆಲ್ಲೆಡೆ ಹರಡಿತ್ತು.   ತನಿಖೆಗಾಗಿ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಿ ಆಂಧ್ರ ಮತ್ತು ಕೇರಳಕ್ಕೆ ಕಳುಹಿಸಲಾಗಿತ್ತು. ಆದರೆ ಯಾವುದೇ ರೀತಿಯ ಸಣ್ಣ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡಕ್ಕೆ ಈ ಪ್ರಕರಣವನ್ನು ವಹಿಸಲು ಚಿಂತನೆ ಮಾಡಿದೆ
ಬಾಂಬ್ ಸ್ಫೋಟ ಪ್ರಕರಣ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ನ್ಯಾಯಾಲಯ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಕೆ.ಎಸ್.ಮುದ್ಗಲ್ ಅವರು ಸ್ಫೋಟದ ತನಿಖೆ ಪೂರ್ಣಗೊಳ್ಳುವವರೆಗೂ ಮಾಧ್ಯಮಗಳು ನ್ಯಾಯಾಲಯ ಪ್ರವೇಶಿಸದಂತೆ ಆದೇಶ ಹೊರಡಿಸಿದ್ದಾರೆ.

Facebook Comments

Sri Raghav

Admin