ಮೈಸೂರು RSS ಮುಖಂಡನ ಹತ್ಯೆ ಪ್ರಕರಣ : ಮುಸ್ಲಿಂ ಸಂಘಟನೆಯೊಂದರ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrest

ಮೈಸೂರು, ಆ.8-ಕಳೆದ ಮಾರ್ಚ್ 13ರಂದು ನಡೆದಿದ್ದ ಆರ್‍ಎಸ್‍ಎಸ್ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಂಘಟನೆಯೊಂದರ ನಾಲ್ವರು ಪ್ರಮುಖ ಆರೋಪಿಗಳನ್ನು ಮೈಸೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಹೆಸರು ಬಹಿರಂಗಪಡಿಸಿಲ್ಲ.  ಹಿಂದೂಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಉದಯಗಿರಿಯ ರಾಜು ಎಂಬುವರನ್ನು ಮಾರ್ಚ್ 13ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಭೇದಿಸಿರುವ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಗೆ ಬಲೆ ಬೀಸಿದ್ದಾರೆ.  ಉದಯಗಿರಿಯ ರಾಜು ಸಿಎ ನಿವೇಶನದಲ್ಲಿ ಮಸೀದಿ ಕಟ್ಟಲು ಮುಂದಾಗಿದ್ದವರ ವಿರುದ್ಧ ಕಾನೂನು ಹೋರಾಟ ಮಾಡಿದ್ದೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.

ಮೂವರು ಆರೋಪಿಗಳು ಮೈಸೂರಿನ ಉದಯಗಿರಿಯವರಾಗಿದ್ದು, ಬೈಕ್‍ನಲ್ಲಿ ಬಂದು ಕ್ಷಣಾರ್ಧದಲ್ಲಿ ಕೊಲೆ ಮಾಡಿ ನಂತರ ಯಾರಿಗೂ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಇಬ್ಬರು ಆರೋಪಿಗಳು ಬಟ್ಟೆ ಬದಲಿಸಿಕೊಂಡು ಶವದ ಬಳಿಯೇ ನಿಂತಿದ್ದರು ಎಂದು ತಿಳಿದುಬಂದಿದೆ.  ಈ ಪ್ರಕರಣವನ್ನು ಪೊಲೀಸರು ಭೇದಿಸಲು ಆಗಿಲ್ಲ. ಇನ್ನೇನು ಮುಚ್ಚಿಹೋಯಿತು ಎಂದು ತಿಳಿದು ಮೈಸೂರಿಗೆ ಕೊಲೆಗಾರರು ವಾಪಸಾಗಿದ್ದರು. ಕಣ್ಗಾವಲಿಟ್ಟಿದ್ದ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಈ ಪೈಕಿ ಓರ್ವ ಎಂಟು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ.   ಬೆಂಗಳೂರು-ಮಂಗಳೂರು ಸೇರಿದಂತೆ ವಿವಿಧೆಡೆ ನಡೆದ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin

Leave a Comments