‘ಮೈಸೂರ್ ಪಾಕ್” ಹಿಂದಿನ ಕಥೆ ಇಲ್ಲಿದೆ ಓದಿ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru-Pak

ಅದು 1935ರ ವರ್ಷದ ಒಂದು ದಿನ. ಅರಮನೆಯ ಪ್ರಧಾನ ಅಡುಗೆಯವರಾದ ಮಾದಪ್ಪನವರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭೋಜನಕ್ಕೆ ಎಲ್ಲವನ್ನೂ ಅಣಿಗೊಳಿಸಿದ್ದರು. ಆದರೆ, ರಾಜಭೋಜನದಲ್ಲಿ ಸಿಹಿ ತಿಂಡಿಯ ಜಾಗ ಖಾಲಿ ಇತ್ತು. ಅದಕ್ಕೆ ಏನನ್ನು ಸಿದ್ಧಗೊಳಿಸುವುದು ಎಂದು ಮಾದಪ್ಪನವರು ಚಿಂತಿಸುತ್ತ ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಇವುಗಳ ಪಾಕದ ಒಂದು ಪ್ರಯೋಗವನ್ನು ಮಾಡಿದರು.  ಮಹಾರಾಜರು ಊಟ ಮುಗಿಸುವ ವೇಳೆಗೆ ಪಾಕ ಗಟ್ಟಿಯಾದಾಗ ಅದನ್ನು ಮಾದಪ್ಪನವರು ಮಹಾರಾಜರಿಗೆ ಅಳುಕಿನಿಂದಲೇ ನೀಡಿದರು. ಈ ಸಿಹಿಯನ್ನು ಚಪ್ಪರಿಸಿ ಸವಿದ ಮಹಾರಾಜರು ಇದೇನಿದು ಹೊಸ ರುಚಿ ಇಷ್ಟು ಸ್ವಾದಿಷ್ಟವಾಗಿದೆ. ಇದರ ಹೆಸರೇನು ಎಂದು ಕೇಳಿದಾಗ, ತಬ್ಬಿಬ್ಬಾದ ಮಾದಪ್ಪನವರು ಇದು ಮೈಸೂರು ಪಾಕ ಎಂದರಂತೆ. ಅಂದಿನಿಂದ ಇದು ಮೈಸೂರು ಪಾಕ ಎಂದು ವಿಶ್ವಪ್ರಸಿದ್ಧವಾಗಿದೆ.

ಈಗ ಇದು ಬಾಯಲ್ಲಿ ನೀರೂರಿಸುವ ಸಿಹಿ ತಿಂಡಿಯಾಗಿ ಮಾರ್ಪಾಡಾಗಿದೆ. ಜಗಜ್ಜಾಹೀರಾದ ಮೈಸೂರು ಪಾಕವಾಗಿದೆ. ಇದು ನಾವೆಲ್ಲ ಸವಿಯುವ ಮೈಸೂರು ಪಾಕದ ಒಂದು ಇತಿಹಾಸ.
ಆಕಸ್ಮಿಕವಾಗಿ ಅರ್ಜೆಂಟಾಗಿ ಮಾದಪ್ಪನವರ ಕೈಯಲ್ಲಿ ತಯಾರಾದ ಒಂದು ಸಿಹಿ ತಿಂಡಿ ಈಗ ವಿಶ್ವಮಾನ್ಯ.

► Follow us on –  Facebook / Twitter  / Google+

Facebook Comments

Sri Raghav

Admin