ಮೊಂಬತ್ತಿ ಬೆಳಕಿನಲ್ಲಿ ಪೊಲೀಸ್ ಅಧಿಕಾರಿಯಾಗಿ ನೀತು

ಈ ಸುದ್ದಿಯನ್ನು ಶೇರ್ ಮಾಡಿ

 

Neethu

ಈ ಹಿಂದೆ ಯಾರದು, ಶುಕ್ರ, ಬೇಟೆ ಮೊದಲಾದ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದ ಶ್ರೀನಿವಾಸ ಕೌಶಿಕ್ ಅವರ ನಿರ್ದೇಶನದಲ್ಲಿ ತಯಾರಾಗಿರುವ ಮತ್ತೊಂದು ಚಿತ್ರ ಮೊಂಬತ್ತಿ. ನಟಿ ನೀತು ಒಬ್ಬ ಪೊಲೀಸ್ ಅಧಿಕಾರಿಣಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ರವಿಕುಮಾರ್ ಹಾಗೂ ರಚನಾ ಸ್ಮಿಥ್ ನಾಯಕ-ನಾಯಕಿಯಾಗಿ ಮೊದಲಬಾರಿಗೆ ಬಣ್ಣ ಹಚ್ಚಿದ್ದಾರೆ. ಟ್ಯಾಕ್ಸಿ ನಂ.1 ಖ್ಯಾತಿಯ ಎಂ.ಪ್ರಭಾಕರ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಹಾಗೂ ಹಾಡುಗಳ ಸಿಡಿ ಬಿಡುಗಡೆ ಸಮಾರಂಭ ಮೊನ್ನೆ ನೆರವೇರಿತು. ಬಿಗ್‍ಬಾಸ್ ಖ್ಯಾತಿಯ ಸಂಜನಾ ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.ಸಮಾರಂಭದಲ್ಲಿ ಮಾತನಾಡಿದ ನಟಿ ನೀತು ನಾನು ಮೊದಲ ಬಾರಿಗೆ ಎಸಿಪಿ ಶಿವಾನಿ ಎಂಬ ಪೊಲೀಸ್ ಅಧಿಕಾರಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಮೊದಲು ಸಾಕಷ್ಟು ಆ್ಯಕ್ಷನ್ ಚಿತ್ರಗಳಲ್ಲಿ ಆಫರ್ ಬಂದಿತ್ತು, ಒಪ್ಪಿದ್ದಿಲ್ಲ. ಈ ಚಿತ್ರದಲ್ಲಿ ಮುಫ್ತಿಯಲ್ಲಿರುವ ಪೊಲೀಸ್ ಆಗಿ ಅಭಿನಯಿಸಿದ್ದೇನೆ.  ಒಂದು ಕೇಸನ್ನು ಯಾವ ರೀತಿ ನಿರ್ವಹಣೆ ಮಾಡಬಹುದೆಂದು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ ಎಂದು ಹೇಳಿದರು. ನಾಯಕನಟ ರವಿಕುಮಾರ್ ವೃತ್ತಿಯಲ್ಲಿ ಕನ್‍ಸ್ಟ್ರಕ್ಷನ್ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಈ ಚಿತ್ರದ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೊಸಬನಾದರೂ ಎಲ್ಲರ ಸಹಕಾರದಿಂದ ಈ ಪಾತ್ರವನ್ನು ಸುಲಭವಾಗಿ ನಿರ್ವಹಿಸಿದ್ದೇನೆ ಎಂದು ಹೇಳಿದರು.

mombatti
ಮತ್ತೊಬ್ಬ ನಟಿ ಸಂಜನಾ ಮಾತನಾಡಿ, ನಾನು ಈ ಚಿತ್ರತಂಡದಲ್ಲಿ ಕೇವಲ ಒಂದೇ ದಿನ ಕೆಲಸ ಮಾಡಿದ್ದೇನೆ. ಆದರೂ ಎಲ್ಲರೂ ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರು. ಚಿತ್ರದ ಹಾಡೊಂದರಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಪತ್ರಕರ್ತ ಹಾಗೂ ನಟ ಯತಿರಾಜ್ ಈ ಚಿತ್ರದಲ್ಲಿ ಎಸಿಪಿ ಶಿವಾನಿಯ ಸಹಾಯಕನಾಗಿ ಕಾಮಿಡಿ ಶೈಲಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಎಂ.ಪ್ರಭಾಕರ್ ಮಾತನಾಡಿ, ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾಯಕನಿಗೆ ಇಲ್ಲಿ 2 ಷೇಡ್‍ಗಳಿವೆ. ಮೂರು ಜನ ನಾಯಕಿಯರಿದ್ದಾರೆ. ನಾನು ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.
ಕೊನೆಯಲ್ಲಿ ನಿರ್ದೇಶಕ ಶ್ರೀನಿವಾಸ ಕೌಶಿಕ್ ಮಾತನಾಡಿ, ಕ್ರೈಂ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು ಹಾಗೂ ಸಕಲೇಶಪುರ ಸುತ್ತಮುತ್ತ 35 ದಿನಗಳ ಕಾಲ ಮಾತಿನ ಭಾಗ ಹಾಗೂ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಸದ್ಯ ಚಿತ್ರದ ಡಿಐ ಕಾರ್ಯ ನಡೆಯುತ್ತಿದೆ. ಜೂನ್‍ನಲ್ಲಿ ಚಿತ್ರವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು. ನಿರ್ದೇಶಕ ಬಿ.ಆರ್.ಕೇಶವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ಸತೀಶ್‍ಬಾಬು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಲಹರಿ ಸಂಸ್ಥೆಯ ವೇಲು ಕೂಡ ಸಮಾರಂಭದಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin