ಮೊದಲಿನಂತೆ ಗ್ರಾಪಂ ಕಛೇರಿಗಳಿಗೆ ಅಧಿಕಾರ ನೀಡಲು ಒತ್ತಾಯಿಸಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

11

ಕಲಘಟಗಿ,ಫೆ.14- ಗ್ರಾಮಾಂತರ ಪ್ರದೇಶದಲ್ಲಿ ಹೊಸ ಪಡಿತರ ಚೀಟಿ ಅರ್ಜಿಗಳ ಅರ್ಹತೆ ಪರಿಶೀಲಿಸುವ ಕಾರ್ಯವನ್ನು ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳು ನಡೆಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದ್ದು ನೌಕರರ ಕಾರ್ಯ ಒತ್ತಡ ಗಮನಿಸಿ ಕೂಡಲೇ ಈ ಮೊದಲಿನಂತೆ ಗ್ರಾಪಂ ಕಛೇರಿಗಳಿಗೆ ಈ ಅಧಿಕಾರ ನೀಡಬೇಕೆಂದು ಕಂದಾಯ ಇಲಾಖೆ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘ ನಿನ್ನೆ ತಾಲೂಕು ಶಿರಸ್ತೇದಾರ ಜಿಕೆ ಹುಬ್ಳೀಕರ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಪಿ.ಎಲ್. ಏಳುಕೋಳಿ ಮಾತನಾಡಿ ಕಂದಾಯ ಇಲಾಖೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸರಕಾರ ಸಕಾಲ ಯೋಜನೆ ಅಡಿಯಲ್ಲಿ ವಹಿಸಿರುವ ಸಾಮಾಜಿಕ ಭದ್ರತೆ ಯೋಜನೆಗಳು, ಆದಾಯ ದೃಢೀಕರಣ ವಂಶವೃಕ್ಷ ಬೆಳೆ
ದೃಡೀಕರಣ ಜಾತಿ ಪ್ರಮಾಣಪತ್ರ ಇದರೊಂದಿಗೆ ಹಕ್ಕು ಬದಲಾವಣೆ ಇನಪುಟ ಸಬ್ಸಿಡಿ ಕೃಷಿ ಗಣತಿ ವಿವಾಹ ನೋಂದಣಿ ಜನನ ಮರಣ ಬೆಳೆಹಾನಿ ಅನೇಕ ಇಲಾಖೆಗಳ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಆರ್ ಪಮ್ಮಾರ, ವಿಠ್ಠಲ ಕೀಲಿ, ಶಿವಕುಮಾರ ಲಮಾಣಿ, ರಾಘವೇಂದ್ರ ಎರಕದ, ಮೋಹನ ಲಮಾಣಿ, ಅಮರೇಶ ಸಂತೋಷ ಲಮಾಣಿ, ಮಂಜುನಾಥ ಲಮಾಣಿ, ಭುವನೇರ್ಶವರಿ ತಳವಾರ, ರಂಜಿತಾ ಹಿರೇಮಠ, ಸಿಮಾ ಕಲಾಲ, ಎಂ.ಕೆ ಹುಲಮನಿ, ಸೇರಿದಂತೆ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin