ಮೊದಲ ಇನ್ನಿಂಗ್ಸ್‍ನಲ್ಲಿ ಭಾರತ 172ಕ್ಕೆ ಆಲ್‍ ಔಟ್

ಈ ಸುದ್ದಿಯನ್ನು ಶೇರ್ ಮಾಡಿ

Cricket--02

ಕೋಲ್ಕತ್ತಾ, ನ.18-ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಮಳೆಬಾಧಿತ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನವಾದ ಇಂದು ಪ್ರಥಮ ಇನ್ನಿಂಗ್ಸ್‍ನಲ್ಲಿ ಭಾರತ 172 ರನ್‍ಗಳಿಗೆ ಸರ್ವಪತನ ಕಂಡಿದೆ. ಐದು ವಿಕೆಟ್‍ಗಳ ನಷ್ಟದೊಂದಿಗೆ 74 ರನ್‍ಗಳಿಂದ ಮೂರನೇ ದಿನದಾಟ ಮುಂದುವರೆಸಿದ ಭಾರತ ಚೇತೇಶ್ವರ್ ಪೂಜಾರ(52), ವೃದ್ಧಿಮಾನ್ ಸಹಾ (29), ರವೀಂದ್ರ ಜಡೇಜಾ (22) ಹಾಗೂ ಮಹಮ್ಮದ್ ಶಮಿ (24) ಹೋರಾಟದ ಪ್ರಯತ್ನದ ನಡುವೆಯೂ 172ಕ್ಕೆ ಆಲ್‍ಔಟ್ ಆಯಿತು.
ಶ್ರೀಲಂಕಾದ ವೇಗದ ಬೌಲರ್ ಸುರಂಗ ಲಕ್ಮಲ್ ಮಾರಕ ದಾಳಿ (4-20) ಮೂಲಕ ಭಾರತದ ರನ್ ದಾಹಕ್ಕೆ ಕಡಿವಾಣ ಹಾಕಿದರು. ಲಹಿರು ಗಮಗೆ, ದುಸಾನ್ ಶನಕ ಮತ್ತು ದಿಲ್‍ರೂವಾನ್ ಪೆರೆರಾ ತಲಾ ಎರಡು ವಿಕೆಟ್‍ಗಳನ್ನು ಕಬಳಿಸಿದರು.

ಆರಂಭಿಕ ಆಘಾತ:

ಮೊದಲ ಇನ್ನಿಂಗ್ಸ್ ಆರಂಭಿಸಿದ ಲಂಕಾ ಕೂಡ ಆರಂಭಿಕ ಆಘಾತ ಅನುಭವಿಸಿತು. ಸ್ವಿಂಗ್ ಮಾಂತ್ರಿಕ, ವೇಗಿ ಭುವನೇಶ್ವರ್ ಕುಮಾರ್ ಅವರು ಲಂಕಾದ ಆರಂಭಿಕರಾದ ಕರುಣಾ ರತ್ನೆ (8) ಮತ್ತು ಸಮರವಿಕ್ರಾಮ (23) ಅವರ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಆದರೆ, ನಂತರ ಬಂದ ತಿರುಮಾನೆ ಮತ್ತು ಎ.ಡಿ.ಮ್ಯಾಥ್ಯೂಸ್ ತಂಡವನ್ನು ಅಪಾಯದಿಂದ ಪಾರು ಮಾಡಿ ಜವಾಬ್ದಾರಿಯ ಆಟ ಪ್ರದರ್ಶಿಸಿದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ , ಬೌಲಿಂಗ್‍ನಲ್ಲಿ ಹಲವು ಬದಲಾವಣೆಗಳನ್ನು ತಂದರೂ ಕೂಡ ಈ ಜೋಡಿ ಉತ್ತಮ ಆಟ ಪ್ರದರ್ಶಿಸಿತು. ಪಿಚ್ ಕೂಡ ಬೌಲರ್‍ಗಳಿಗೆ ಅನುಕೂಲಕರವಾಗಿದ್ದು, ಇಂದು ಮಳೆ ಇಲ್ಲದ ಕಾರಣ ಬ್ಯಾಟ್ಸ್‍ಮನ್‍ಗಳು ತಮ್ಮ ಜವಾಬ್ದಾರಿಯುತ ಆಟ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. 2 ಗಂಟೆ ವೇಳೆಗೆ 20 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಲಂಕಾ 80 ರನ್ ಗಳಿಸಿತ್ತು.

Facebook Comments

Sri Raghav

Admin