ಮೊದಲ 100 ದಿನಗಳ ಆಡಳಿತ ಅತ್ಯಂತ ಯಶಸ್ವಿ : ಟ್ರಂಪ್ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

Trump-02

ವಾಷಿಂಗ್ಟನ್, ಏ.29-ತಮ್ಮ ಮೊದಲ 100 ದಿನಗಳ ಆಡಳಿತವು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಯಶಸ್ಸಿನದ್ದಾಗಿದೆ ಎಂದು ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ತಮ್ಮ ನೇತೃತ್ವದ ಸರ್ಕಾರ ಶತದಿನೋತ್ಸವ ಪೂರೈಸಿದ ಸಂದರ್ಭದಲ್ಲಿ ವಾಷಿಂಗ್ಟನ್‍ನಲ್ಲಿ ಹೇಳಿಕೆ ನೀಡಿದ ಟ್ರಂಪ್, ನನ್ನ ಆಡಳಿತವು ಅಮೆರಿಕದಲ್ಲಿ ಮಹತ್ವದ ಬದಲಾವಣೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.ಕೇವಲ 14 ವಾರಗಳಲ್ಲೇ ಅಮೆರಿಕ ಇತಿಹಾಸದಲ್ಲಿ ಹಿಂದೆಂದೂ ಕಾಣದಂಥ ಪರಿವರ್ತನೆ ಮತ್ತು ಅಭಿವೃದ್ದಿ ಕಾರ್ಯಗಳಾಗಿವೆ ಎಂದು ಅವರು ಹೇಳಿದರು. ನೂರು ದಿನಗಳ ಟ್ರಂಪ್ ಆಡಳಿತದಲ್ಲಿ ಅಮರಿಕ-ಭಾರತ ನಡುವಣ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ಕೆಲವು ರಾಜತಾಂತ್ರಿಕರು ಬಣ್ಣಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin