ಮೊಬೈಲ್ ಕದ್ದಿದ್ದಕ್ಕೆ ಕುದಿಯುವ ಎಣ್ಣೆಯಲ್ಲಿ ಕೈ ಮುಳುಗಿಸಿ ಮಕ್ಕಳಿಗೆ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Oil-Hand--01

ರತ್ನಂ (ಮಧ್ಯಪ್ರದೇಶ), ಫೆ.23-ಮೊಬೈಲ್ ಕದ್ದ ಆರೋಪಕ್ಕಾಗಿ ಕ್ರೂರಿಯೊಬ್ಬ ಐವರು ಮಕ್ಕಳ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಮುಳುಗಿಸಿ ಶಿಕ್ಷೆ ನೀಡಿದ ಅಮಾನವೀಯ ಕೃತ್ಯ ಮಧ್ಯಪ್ರದೇಶದ ರತ್ನ ಜಿಲ್ಲೆಯ ನರಸಿಂಗವಾಡ ಗ್ರಾಮದಲ್ಲಿ ನಡೆದಿದೆ. ತೀವ್ರ ಸುಟ್ಟಗಾಯಗಳಾಗಿರುವ ಐವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಹೀನ ಕೃತ್ಯ ನಡೆಸಿದ ಭಗನ್ ಲಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಭಗನ್‍ಲಾಲ್‍ನ 13 ವರ್ಷದ ಮಗನ ಮೊಬೈಲ್ ಕಳುವಾಗಿತ್ತು. ಇದರಿಂದ ಅಕ್ಕಪಕ್ಕದ ಮಕ್ಕಳ ಮೇಲೆ ಅನುಮಾನಗೊಂಡ ಆತ ನಿರಾಪರಾಧಿ ಎಂದು ಸಾಬೀತು ಮಾಡಲು ಕುದಿಯುವ ಎಣ್ಣೆಯಲ್ಲಿ ಕೈಗಳನ್ನು ಮುಳುಗಿಸುವಂತೆ ಎಂಟರಿಂದ 13 ವರ್ಷದ ಐವರು ಮಕ್ಕಳಿಗೆ ತಿಳಿಸಿದ.

ನೀವು ಮೊಬೈಲ್ ಕಳುವು ಮಾಡಿದ್ದರೆ ಕೈಗಳು ಸುಟ್ಟು ಹೋಗುತ್ತವೆ ಎಂದು ತಿಳಿಸಿ ಮಕ್ಕಳನ್ನು ಬಲವಂತವಾಗಿ ಕಾದ ಎಣ್ಣೆಯೊಳಗೆ ಕೈ ಹಾಕುವಂತೆ ಮಾಡಿದ. ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು ಮೂವರಿಗೆ ಶೇ.55ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ. ಈ ಕೃತ್ಯದಿಂದಾಗಿ ಗ್ರಾಮದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin