ಮೋಜಿಗಾಗಿ ನಡೆಯುವ ಕೋಳಿ ಕಾಳಗಕ್ಕೆ ಹೈದರಾಬಾದ್ ಹೈಕೋರ್ಟ್’ನಿಂದ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Hen-Fight-01

ಹೈದರಾಬಾದ್,ಡಿ.26-ಆಂಧ್ರಪ್ರದೇಶದ ಪ್ರಸಿದ್ಧ ನಾಡಹಬ್ಬ ಸಂಕ್ರಾಂತಿ ಸಂದರ್ಭದಲ್ಲಿ ಮೋಜಿಗಾಗಿ ನಡೆಯುವ ಕೋಳಿ ಕಾಳಗ ಜೂಜಿಗೆ ಹೈದರಾಬಾದ್ ಹೈಕೋರ್ಟ್ ನಿರ್ಬಂಧಿಸಿದೆ. ಕೋಳಿ ಕಾಳಗದ ಮೂಲಕ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ ಹಾಗೂ ಮೋಜಿಗಾಗಿ ನಡೆಯುವ ಈ ಕ್ರೀಡೆಯಲ್ಲಿ ಕೋಟ್ಯಂತರ ಜೂಜು ನಡೆಯುತ್ತದೆ ಎಂದು ಆರೋಪಿಸಿ, ಕೋಳಿ ಜೂಜನ್ನು ರದ್ದುಗೊಳಿಸುವಂತೆ ಪ್ರಾಣಿ ದಯಾ ಸಂಘಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದವು.   ಈ ಅರ್ಜಿಗಳ ವಿಚಾರಣೆ ನಡೆಸಿರುವ ಕೋರ್ಟ್ ಇಂದು ಕೋಳಿ ಕಾಳಗ ನಡೆಸುವುದನ್ನು ನಿರ್ಬಂಧಿಸಿ ಮಹತ್ವದ ಆದೇಶ ಹೊರಡಿಸಿದೆ.

ವಿಶೇಷವಾಗಿ ಗೋದಾವರಿ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ವೇಳೆ ಕೋಳಿ ಕಾಳಗ ಸ್ಪರ್ಧೆಗಳು ನಡೆಯುತ್ತವೆ. ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ನೂರಾರು ಜನರು ಈ ಜೂಜಿನಲ್ಲಿ ಭಾಗವಹಿಸುತ್ತಿದ್ದರು. ಕಾಳಗಕ್ಕಾಗಿ ನೂರಾರು ಕೋಳಿಗಳನ್ನು ಸಜ್ಜುಗೊಳಿಸಲಾಗುತ್ತಿತ್ತು. ಜೂಜಿನಲ್ಲಿ ಅನೇಕ ಕೋಳಿಗಳು ಸಾವಿಗೀಡಾಗುತ್ತಿದ್ದವು. ಕೆಲವೊಮ್ಮೆ ಕೋಳಿ ಪಂದ್ಯದ ವೇಳೆ ಉಂಟಾಗುತ್ತಿದ್ದ ಗಲಭೆಗಳಲ್ಲಿ ಕೊಲೆಗಳೂ ಕೂಡ ನಡೆಯುತ್ತಿದ್ದವು.  ಒಂದು ಅಂದಾಜಿನ ಪ್ರಕಾರ 100 ಕೋಟಿ ರೂ.ಗಳಿಗೂ ಹೆಚ್ಚು ಜೂಜು ವಹಿವಾಟು ನಡೆಯುತ್ತಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin