ಮೋದಿಗೆ ಇಂಗ್ಲೆಂಡ್‍ನಲ್ಲಿ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

Modi-England

ಲಂಡನ್, ಏ.15-ಪ್ರಧಾನಿ ನರೇಂದ್ರ ಮೋದಿ ಏ.17 ರಿಂದ ನಾಲ್ಕು ದಿನಗಳ ಕಾಲ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳವಾರ ರಾಜಧಾನಿ ಲಂಡನ್‍ಗೆ ಆಗಮಿಸುವ ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲು ವೇದಿಕೆ ಸಜ್ಜಾಗಿದೆ. ಕಾಮನ್‍ವೆಲ್ತ್ ಸರ್ಕಾರ ಸಭೆಯ ಮುಖ್ಯಸ್ಥರ (ಸಿಎಚ್‍ಒಜಿಎಂ) ಸಭೆಯಲ್ಲಿ ಭಾಗವಹಿಸುವ ಮೋದಿ ಇಂಗ್ಲೆಂಡ್ ಜೊತೆ ಅನೇಕ ಮಹತ್ವದ ದ್ವಿಪಕ್ಷೀಯ ಸಭೆಗಳಲ್ಲಿ ಪಾಲ್ಗೊಳ್ಳುವರು.

ಬುಧವಾರ ಅವರು ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರನ್ನು ಭೇಟಿ ಮಾಡುವರು. ಅದೇ ದಿನ ರಾತ್ರಿ ಮಹಾರಾಣಿ ಎಲಿಜಬೆತ್ ಅವರೊಂದಿಗೆ ಮಾತುಕತೆ ನಡೆಸುವರು. ಬ್ರಿಟಿಷ್ ಸರ್ಕಾರದ ಸಚಿವರು ಮತ್ತು ಗಣ್ಯಾತಿಗಣ್ಯರೊಂದಿಗೂ ಸಮಾಲೋಚನೆ ನಡೆಸುವರು. ಈ ಸಂದರ್ಭದಲ್ಲಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.

Facebook Comments

Sri Raghav

Admin