ಮೋದಿಗೆ ಹೇಳಿಕೆ ಸಮರ್ಥಿಸಿಕೊಂಡ ಬಲೂಚ್ ನಾಯಕರ ವಿರುದ್ಧ ಪಾಕ್ ಎಫ್ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

Modi-PM

ಕ್ವೆಟ್ಟಾ, ಆ.23– ಬಲೂಚಿಸ್ತ್ಞಾನದ ಜನರಿಗೆ ಸಹಕಾರ ನೀಡುವ ಪ್ರಧಾನಿ ನರೇಂದ್ರಮೋದಿಯವರ ಹೇಳಿಕೆಗಳಿಗೆ ಬೆಂಬಲ ಸೂಚಿಸಿದ ಈ ಪ್ರಾಂತ್ಯದ ನಾಯಕರ ವಿರುದ್ಧ ಪಾಕಿಸ್ತಾನ ಸರ್ಕಾರ ಎಫ್ಐಆರ್ ದಾಖಲಿಸಿದೆ.  ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಬಲೂಚಿಸ್ತಾನದ ನಾಯಕರುಗಳಾದ ಬ್ರಹಮ್ದಗ್ ಬುಗ್ಟಿ, ಹರ್ಬಿಯರ್ ಮರ್ರಿ ಮತ್ತು ಬಾನುಕ್ ಕರೀಮಾ ಬಲೂಚಿ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.  ಮೋದಿ ಹೇಳಿಕೆಗಳಿಗೆ ಈ ಮುಖಂಡರು ಬೆಂಬಲ ನೀಡುತ್ತಿದ್ದಾರೆಂದು ಫಿರ್ಯಾದುದಾರರಾದ ಮುನೀರ್ ಅಹಮದ್, ಮೌಲಾನಾ ಮಹಮದ್ ಅಸ್ಲಂ, ಮಹಮದ್ ಹುಸೇನ್, ಗುಲಾಂ ಯಾಸಿನ್ ಜಟಕ್ ಮತ್ತು ಮೌಲಾನಾ ರಹೀಂ ಎಂಬುವರು ಬಲೂಚಿಸ್ತಾನದ ಬುರ್ದರ್ ಪ್ರದೇಶದ ಐದು ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಬಲೂಚಿಸ್ತಾನದ ಜನರಿಗೆ ತಾವು ಸಹಕಾರ ನೀಡುವುದಾಗಿ ನರೇಂದ್ರ ಮೋದಿಯವರು ಬಹಿರಂಗ ಹೇಳಿಕೆ ನೀಡಿದ್ದನ್ನು ಸ್ವಾಗತಿಸಿ ಬಲೂಚ್ ಮುಖಂಡರು ಬೆಂಬಲ ಸೂಚಿಸಿದ್ದರು. ಇದರಿಂದ ಆತಂಕಗೊಂಡ ಪಾಕ್ ಸರ್ಕಾರ ಮೊಕದ್ದಮೆಗಳನ್ನು ದಾಖಲು ಮಾಡಿಕೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin