ಮೋದಿಜಿ ನಮ್ಮ ಶಾಲೆಗಿಂತ ನಿಮ್ಮ ಕಾರ್ಯಕ್ರಮವೇ ಮುಖ್ಯಾನಾ..?

ಈ ಸುದ್ದಿಯನ್ನು ಶೇರ್ ಮಾಡಿ
Modi
ಪ್ರಧಾನಿ ಮೋದಿಗೆ ಪತ್ರ ಬರೆಯುತ್ತಿರುವ ದೇವಾಂಶ್ ಜೈನ್‍

ಭೂಪಾಲ್, ಆ.9- ಮಧ್ಯ ಪ್ರದೇಶದ ಎಂಟನೆ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಕ್ಕೆ ಫಲ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಈ ಪತ್ರದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತಾನು ಹೊರಡಿಸಿದ್ದ ಆದೇಶ ಹಿಂಪಡೆದಿದೆ.  ಪ್ರಧಾನಿ ನರೇಂದ್ರ ಮೋದಿ, ಮಧ್ಯ ಪ್ರದೇಶದ ಆಲಿರಾಜ್‍ಪುರ ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಜೊತಾರ್ದಾ ಗ್ರಾಮದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿತ್ತು. ಅಲ್ಲದೆ, 70 ಸಾಲ್ ಆಜಾದಿ, ಯಾದ್ ಕರೋ ಕುರ್ಬಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿತ್ತು.  ಈ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲು ಮುಂದಾಗಿದ್ದ ಜಿಲ್ಲಾಡಳಿತ, ಎಲ್ಲ ಶಾಲೆಗಳಿಗೂ ಸುತ್ತೋಲೆ ಕಳುಹಿಸಿ ಶಾಲಾ ಬಸ್ ಗಳನ್ನು ಕಳುಹಿಸಿಕೊಡುವಂತೆ ಸೂಚಿಸಿತ್ತು. ಹೀಗಾಗಿ ಅಲ್ಲಿನ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಲಾಗಿದೆ. ಆದರೆ, ಇದು ಖಾಂಡ್ವಾದ ವಿದ್ಯಾಕುಂಜ್ ಶಾಲೆಯ 8ನೆ ತರಗತಿ ದೇವಾಂಶ್ ಜೈನ್‍ಗೆ ಸರಿ ಕಾಣಲಿಲ್ಲ.
ಈತ, ಪ್ರಧಾನಿ ನರೇಂದ್ರ ಮೋದಿಯವರಿಗೇ ಈ ಕುರಿತು ಪತ್ರ ಬರೆದಿದ್ದು, ನಮ್ಮ ಶಾಲೆಗಿಂತ ನಿಮ್ಮ ಕಾರ್ಯಕ್ರಮವೇ ಮುಖ್ಯವಾ ಎಂದು ಪ್ರಶ್ನಿಸಿದ್ದ. ನಾನು ನಿಮ್ಮ ಅಭಿಮಾನಿಯಾಗಿದ್ದು, ಶಿಕ್ಷಣದ ಮಹತ್ವದ ಕುರಿತು ನೀವು ಹಲವು ಸಂದರ್ಭಗಳಲ್ಲಿ ಹೇಳಿದ್ದನ್ನು ಕೇಳಿದ್ದೇನೆ. ಆದರೆ, ಈಗ ಕಾರ್ಯಕ್ರಮದ ಕಾರಣ ನಮಗೆ ಎರಡು ದಿನಗಳ ಕಾಲ ತರಗತಿಗಳು ಇಲ್ಲದಂತಾಗುತ್ತವೆ ಎಂದು ಹೇಳಿಕೊಂಡಿದ್ದ. ಈ ಪತ್ರದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈಗ ಎಲ್ಲ ಶಾಲೆಗಳಿಗೂ ಮತ್ತೊಂದು ಸುತ್ತೋಲೆ ಕಳುಹಿಸಿ ಕಾರ್ಯಕ್ರಮಕ್ಕೆ ವಾಹನಗಳನ್ನು ಕಳುಹಿಸುವ ಅವಶ್ಯಕತೆಯಿಲ್ಲ ಹಾಗೂ ಶಾಲೆಗೂ ರಜೆ ಘೋಷಿಸಬೇಡಿ ಎಂದು ತಿಳಿಸಿದೆ.

 

Facebook Comments

Sri Raghav

Admin