ಮೋದಿಯವರ ಆಡಳಿತವನ್ನು ಬೆಂಬಲಿಸಿ ಏಕಾಂಗಿ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

mysore

ಮೈಸೂರು, ನ.28-ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಬೆಂಬಲಿಸಿ ನಗರದ ನ್ಯಾಯಾಲಯದ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ಚಾಮರಾಜ ಕ್ಷೇತ್ರದ ನಿವಾಸಿ ಮನೋಜ್‍ಕುಮಾರ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.ಇಂದು ಬೆಳಗ್ಗೆಯಿಂದ ಆರಂಭವಾದ ಇವರ ಏಕಾಂಗಿ ಹೋರಾಟ ಸಂಜೆ 5ರವರೆಗೆ ನಡೆಯಲಿದೆ. ನಂತರ ಹೋರಾಟ ಮುಗಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ರಂದೀಪ್ ಅವರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.ಮನವಿ ಪತ್ರದಲ್ಲಿ ಪ್ರಧಾನಿ ಮೋದಿ ದೇಶದಲ್ಲಿ ಉತ್ತಮ ನಡೆಸುತ್ತಿದ್ದಾರೆ. ಭ್ರಷ್ಟಾಚಾರ, ಕಪ್ಪು ಹಣ ನಿಯಂತ್ರಿಸುವ ಸಲುವಾಗಿ 500, 1000 ಮುಖಬೆಲೆಯ ನೋಟುಗಳ ನಿಷೇಧಿಸಿರುವ ಕ್ರಮ ಸರಿಯಾಗಿದೆ ಎಂಬ ವಿಷಯಗಳನ್ನೊಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಇಂದು ಸಂಜೆ ಸಲ್ಲಿಸಲಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin