ಮೋದಿ ಅಭಿವೃದ್ದಿ ಕಾರ್ಯಗಳಿಗೆ ಸಂದ ಜಯ : ಕೇಂದ್ರ ಸಚಿವರುಗಳ ಶ್ಲಾಘನೆ

ಈ ಸುದ್ದಿಯನ್ನು ಶೇರ್ ಮಾಡಿ

modi-in-chamaraja-nagara
ನವದೆಹಲಿ, ಮೇ 15-ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಜಯಸಾಧಿಸಿರುವುದಕ್ಕೆ ಸಂತುಷ್ಟಗೊಂಡಿರುವ ಕೇಂದ್ರ ಸಚಿವರುಗಳು ಇದು ಕಾಂಗ್ರೆಸ್ ವಿರುದ್ಧದ ಸ್ಪಷ್ಟ ಜನಾದೇಶ ಎಂದು ಹೇಳಿದ್ದಾರೆ. ಕಾಂಗ್ರೆಸ್‍ನನ್ನು ಜನ ನಿರಾಕರಿಸಿದ್ದಾರೆ. ಆ ಪಕ್ಷದ ನಕರಾತ್ಮಕ ಕಾರ್ಯಸೂಚಿಗಳನ್ನು ಜನ ಒಪ್ಪಿಲ್ಲ ಎಂಬುದಕ್ಕೆ ಈ ಫಲಿತಾಂಶ ಸಾಬೀತು ಮಾಡಿದೆ. ಕೆಲವರು (ರಾಜೀವ್ ಗಾಂಧಿ) ತಾವೇ ಮುಂದಿನ ಪ್ರಧಾನಿ ಎಂದು ಕನಸು ಕಾಣುತ್ತಿದ್ದರು. ಅವರ ಹಗಲುಗನಸಿಗೆ ಭಂಗವಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಲೇವಡಿ ಮಾಡಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿ, ಇದೊಂದು ಐತಿಹಾಸಿಕ ದಿನ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ ಯೋಜನೆಗಳಿಗೆ ಇದು ಸಂದ ಜಯ, ಕಾಂಗ್ರೆಸ್‍ನ ಹಾನಿಕಾರಕ ಮತ್ತು ನಕರಾತ್ಮಕ ರಾಜಕಾರಣವನ್ನು ಜನ ನಿರಾಕರಿಸಿದ್ಧಾರೆ ಎಂದು ಬಣ್ಣಿಸಿದ್ದಾರೆ. ಇದು ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಂದ ಗೆಲುವು. ಬಿಜೆಪಿ ಜನತೆಯ ಪಕ್ಷವಾಗಿದೆ. ಎಂಬುದನ್ನು ಈ ಫಲಿತಾಂಶ ರುಜುವಾತು ಪಡಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜÁವ್ಡೇಕರ್ ಹೇಳಿದ್ದಾರೆ.

Facebook Comments

Sri Raghav

Admin