ಮೋದಿ ಇಂಪ್ಯಾಕ್ಟ್ : ಕರಾಚಿಯಲ್ಲೇ ಪಾಕ್ ವಿರುದ್ಧ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Modi

ಕರಾಚಿ. ಸೆ. 12-ಪಾಕ್ ಆಕ್ರಮಿತ ಬಲೂಚಿಸ್ತಾನದಲ್ಲಿ ಮುಗ್ಧರ ಮೇಲೆ ಪಾಕಿಸ್ತಾನಿ ಸೇನೆ ನಡೆಸುತ್ತಿರುವ ಹಿಂಸಾಚಾರವನ್ನು ಖಂಡಿಸಿ ಪಾಕ್‍ನ ಬಂದರು ನಗರಿ ಕರಾಚಿಯಲ್ಲಿ ಬಲೂಚ್ ಮಾನವ ಹಕ್ಕುಗಳ ಸಂಘಟನೆಯ ಹಲವಾರು ಕಾರ್ಯಕರ್ತರು ನಿನ್ನೆ ಪ್ರತಿಭಟನೆ ನಡೆಸಿದರು. ಬಲೂಚ್ ಜನರ ಹಿತಾಸಕ್ತಿ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಸ್ತಾಪಿಸಿದ ನಂತರ ವಿವಿಧೆಡೆ ಪಾಕ್ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಪಾಕ್ ಯೋಧರು ಬಲೂಚ್‍ನ ವಿವಿಧ ಪ್ರಾಂತ್ಯಗಳಲ್ಲಿ ಜನರ ಮೇಲೆ ಹಿಂಚಾಚಾರ ಎಸಗುತ್ತಾ ಸ್ಥಳೀಯ ರಾಜಕೀಯು ಮುಖದ ರೌಫ್ ಬಲೂಚ್ ಅವರ ಮನೆಗೆ ದಿಗ್ಬಂಧನ ಹೇರಿರುವ ಕ್ರಮವನ್ನು ಖಂಡಿಸಿ ಕರಾಚಿ ಬೀದಿಗಳಲ್ಲಿ ಮಾನವ ಹಕ್ಕು ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಪಾಕ್ ಸರ್ಕಾರ ಮತ್ತು ಸೇನೆ ವಿರುದ್ಧ ಘೋಷಣೆ ಕೂಗಿದರು.

► Follow us on –  Facebook / Twitter  / Google+

Facebook Comments

Sri Raghav

Admin