ಮೋದಿ-ಜಿನ್‍ಪಿಂಗ್ ಭೇಟಿ ರಾಜೀವ್-ಡೆಂಗ್ ಸಭೆಯಷ್ಟೇ ಮಹತ್ವ : ಚೀನಾ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

Modi-And-xi

ಬೀಜಿಂಗ್, ಏ.24-ಇಂಡೋ-ಚೀನಿ ನಡುವೆ ಉದ್ವಿಗ್ನ ವಾತಾವರಣ ನೆಲೆಗೊಂಡಿರುವಾಗಲೇ ವುಹಾನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನಡುವೆ ನಡೆಯುವ ಶೃಂಗಸಭೆ ಜಗತ್ತಿನ ಗಮನ ಸೆಳೆದಿದೆ.  ಈ ವಾರ ಮೋದಿ-ಜಿನ್‍ಪಿಂಗ್ ಭೇಟಿಯಾಗಲಿದ್ದು, ದಿನಗಣನೆ ಆರಂಭವಾಗಿದೆ. ಈ ಇಬ್ಬರು ನಾಯಕರ ಭೇಟಿಯನ್ನು ಅತ್ಯಂತ ಮಹತ್ವದ್ದು ಎಂದು ಬಣ್ಣಿಸಿರುವ ಚೀನಾ ಮಾಧ್ಯಮಗಳು ಇದು 1988ರಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಮತ್ತು ಆಗಿನ ಚೀನಾ ನಾಯಕ ಡೆಂಗ್ ಕ್ಸಿಯೊಂಪಿಂಗ್ ಸಭೆಯಷ್ಟೇ ಪ್ರಾಮುಖ್ಯತೆ ಹೊಂದಿದೆ ಎಂದು ಹೇಳಿವೆ. ಮೋದಿ ಮತ್ತು ಜಿನ್‍ಪಿಂಗ್ ಏ.27 ಮತ್ತು 28ರಂದು ಚೀನಾದ ವುಹಾನ್ ನಗರದಲ್ಲಿ ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಂಡು ಸಮಾಲೋಚನೆ ನಡೆಸಲಿದ್ದಾರೆ. ದ್ವಿಪಕ್ಷೀಯ ಸಂಬಂಧ ಸುಧಾರಣೆ ಹಾಗೂ ಪರಸ್ಪರ ಕಾಳಜಿಯ ಜÁಗತಿಕ ವಿಷಯಗಳ ಬಗ್ಗೆಯೂ ಚರ್ಚೆಯಾಗಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin