ಮೋದಿ ಪದಚ್ಯುತಿಗೊಳ್ಳುವವರೆಗೂ ಅರ್ಧ ತಲೆ ಬೋಳಿಸಿಕೊಂಡಿರುವುದಾಗಿ ಕೇರಳದ ವೃದ್ಧ ಶಪಥ

ಈ ಸುದ್ದಿಯನ್ನು ಶೇರ್ ಮಾಡಿ

Modi-Man

ಕೊಲ್ಲಂ, ನ.28-ಕೇಂದ್ರ ಸರ್ಕಾರ ದಿಢೀರ್ ಜಾರಿಗೊಳಿಸಿದ ಗರಿಷ್ಠ ಮುಖಬೆಲೆಯ ನೋಟು ರದ್ದತಿಯಿಂದ ತೊಂದರೆಗೆ ಒಳಗಾದ ಕೇರಳದ ಕೊಲ್ಲಂನ ಸಣ್ಣ ಹೋಟೆಲ್ ಮಾಲೀಕನೊಬ್ಬ ವಿನೂತನ ರೀತಿಯಲ್ಲ ತನ್ನ ಪ್ರತಿಭಟನೆ ವ್ಯಕ್ತಪಡಿಸಿದ್ದಾನೆ. ತನ್ನ ಅರ್ಧ ತಲೆಯನ್ನು ಬೋಳಿಸಿಕೊಂಡಿರುವ 70 ವರ್ಷದ ಯಾಹಿಯಾ, ಪ್ರಧಾನಿ ನರೇಂದ್ರ ಮೋದಿ ಪದಚ್ಯುತಗೊಳ್ಳುವ ತನ್ನ ತನ್ನ ಕೂದಲನ್ನು ಬೆಳೆಸುವುದಿಲ್ಲ ಎಂದು ಶಪಥ ಮಾಡಿದ್ದಾನೆ.  ನೋಟು ಅಮಾನ್ಯಗೊಂಡಿರುವುದರಿಂದ ತನ್ನಂಥ ಕೆಳವರ್ಗದ ಜನರಿಗೆ ಆಗಿರುವ ತೊಂದರೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯಾಹಿಯಾ ತನ್ನ ಬಕ್ಕತಲೆಯ ಅರ್ಧ ಕೂದಲನ್ನು ಬೋಳಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜÁಲತಾಣಗಳಲ್ಲಿ ವೈರಲ್ ಆಗಿದ್ದು ಜನರ ಗಮನಸೆಳೆಯುತ್ತಿದೆ.

 ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin