ಮೋದಿ ಪಾಲ್ಗೊಳ್ಳುವ ಪರಿವರ್ತನಾ ರ‍್ಯಾಲಿಯ ವೇದಿಕೆಯನ್ನು ಪೂರ್ವಾಭಿಮುಖವಾಗಿ ನಿರ್ಮಿಸಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Parivartana-Yatre--01

ಬೆಂಗಳೂರು, ಫೆ.4-ವಾಸ್ತು ತಜ್ಞರ ಸೂಚನೆಯಂತೆ ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದ ಪ್ರಮುಖ ವೇದಿಕೆಯನ್ನು ಪೂರ್ವಾಭಿಮುಖವಾಗಿಯೇ ನಿರ್ಮಾಣ ಮಾಡಿದ್ದು ವಿಶೇಷವಾಗಿತ್ತು. ರ್ವಾಭಿಮುಖವಾಗಿ ಪ್ರಧಾನಿಯವರು ಭಾಷಣ ಮಾಡಿದರೆ ಪಕ್ಷಕ್ಕೆ ಅದೃಷ್ಟ ಒಲಿಯುತ್ತದೆ ಎಂಬುದು ಬಹುತೇಕರ ನಂಬಿಕೆ. ಜ್ಯೋತಿಷಿಗಳು ಹಾಗೂ ವಾಸ್ತುಶಿಲ್ಪಿಗಳು ಕೂಡ ಪೂರ್ವಾಭಿಮುಖವಾಗಿಯೇ ವೇದಿಕೆ ನಿರ್ಮಾಣ ಮಾಡಬೇಕೆಂದು ಸಲಹೆ ಮಾಡಿದ್ದರು.  [ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ (Live Updates) ]

ಇದರಂತೆ ಅರಮನೆ ಮೈದಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿತ್ತು. ಮುಖ್ಯ ವೇದಿಕೆಯಲ್ಲಿ 27 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಪೂರ್ವಾಭಿಮುಖವಾಗಿ ವೇದಿಕೆ ನಿರ್ಮಾಣ ಮಾಡಿದ್ದರಿಂದಲೇ ಬಿಜೆಪಿ 17 ಸ್ಥಾನ ಪಡೆಯಲು ಅವಕಾಶವಾಗಿತ್ತು. ಅಂದು ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅರಮನೆ ಮೈದಾನದಲ್ಲೇ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಇದೀಗ ಸಮಾರೋಪ ಸಮಾರಂಭದಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಪ್ರಾರಂಭದಲ್ಲೇ ಹೋಮ-ಹವನ, ವಿಶೇಷ ಪೂಜೆಗಳನ್ನು ಮಾಡಲಾಗಿತ್ತು.

Facebook Comments

Sri Raghav

Admin