ಮೋದಿ ಪ್ರಧಾನಿಯಾದಮೇಲೆ ವಿದೇಶಗಳು ಅಚ್ಚರಿಪಡುವಷ್ಟು ಬೆಳವಣಿಗೆಗಳು ನಡೆದಿವೆ : ಷಾ

ಈ ಸುದ್ದಿಯನ್ನು ಶೇರ್ ಮಾಡಿ

Amith-Shah

ಮಂಗಳೂರು, ಆ.21-ಅಭಿವೃದ್ಧಿ ಮತ್ತು ಭದ್ರತೆ ವಿಚಾರದಲ್ಲಿ ಭಾರತ ದೇಶ ನಾಗಾಲೋಟದಲ್ಲಿದೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ಬೇರೆ ದೇಶಗಳು ಅಚ್ಚರಿಪಡುವಷ್ಟು ಬೆಳವಣಿಗೆಗಳು ನಡೆದಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದಿಲ್ಲಿ ಹೇಳಿದರು.  ಇಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಆವರಣದಲ್ಲಿ ಏರ್ಪಡಿಸಿದ್ದ ತಿರಂಗ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲು ನಮ್ಮ ದೇಶವನ್ನು ಹೊರ ದೇಶಗಳು ಬೇರೆಯೇ ದೃಷ್ಟಿಕೋನದಿಂದ ನೋಡುತ್ತಿದ್ದರು, ಆದರೆ ಮೋದಿಯವರು ಪ್ರಧಾನಿಯಾದ ಮೇಲೆ ಬೇರೆ ದೇಶದವರು ನೋಡುವ ದೃಷ್ಟಿಕೋನ ಬದಲಾಗಿದೆ. ಇದಕ್ಕೆ ನಾವು ಹೆಮ್ಮೆ ಪಡಬೇಕು ಎಂದು ಹೇಳಿದರು.

ದೆಹಲಿ ಆದೇಶಕ್ಕೆ ಕಾಯದೆ ಗಡಿಯಲ್ಲಿ ಸೇನೆ ಶತ್ರುಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ. ಗಡಿಯಲ್ಲಿ ಶತ್ರುಗಳ ಸಂಹಾರವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ತಿರಂಗ ಯಾತ್ರೆ ಯುವಜನತೆಯ ಪ್ರೇರಣೆ ಕಾರ್ಯಕ್ರಮವಾಗಿದೆ. ದೇಶಾದ್ಯಂತ ಇಂತಹ ಕಾರ್ಯಕ್ರಮವನ್ನು ರೂಪಿಸಬೇಕು. ದೇಶಕ್ಕಾಗಿ ಮಡಿದವರನ್ನು ಸ್ಮರಿಸುವ ಈ ಕಾರ್ಯಕ್ರಮ ಎಲ್ಲೆಡೆ ನಡೆಯಬೇಕು ಎಂದು ಅವರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕರ್ನಾಟಕ ಇನ್ನೂ ಮಾದರಿ ರಾಜ್ಯವಾಗಿಲ್ಲ, ಮಾದರಿರಾಜ್ಯವಾಗಿ ಪರಿವರ್ತನಯಾಗಬೇಕಾದರೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅವರು ತಿಳಿಸಿದರು.  ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ವಿನಯ್ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ನಿಕ್, ಮಂಗಳೂರು ಬಿಜೆಪಿ ಜಿಲ್ಲಾಧ್ಯಕ್ಷ , ಸ್ಥಳೀಯ ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin