ಮೋದಿ ಭಾಷಣದ ಎಫೆಕ್ಟ್ : ಬಲೂಚ್ನಲ್ಲಿ ರಾಸಾಯನಿಕ ಅಸ್ತ್ರ ಬಳಸಿ 100 ಜನರ ಹತ್ಯೆ
ನವದೆಹಲಿ, ಆ.31- ಬಲೂಚಿಸ್ತಾನದಲ್ಲಿ ನಾಗರಿಕ ಮೇಲೆ ಪಾಕಿಸ್ತಾನ ಸೇನಾ ಪಡೆಗಳು ದೌರ್ಜನ್ಯ ಎಸಗುತ್ತಿರುವುದು ಹೊಸ ಸಂಗತಿಯಲ್ಲ. ಆದರೆ, ಸ್ವಾತಂತ್ರ್ಯ ದಿನಾಚರಣೆ ದಿನದಂದು ಪ್ರಧಾನಿ ನರೇಂದ್ರಮೋದಿ ಅವರು ಭಾಷಣ ಮಾಡಿದ ನಂತರ ಪಾಕ್ ಸೇನೆಯ ಭಯಾನಕ ಮುಖ ಅನಾವರಣಗೊಳ್ಳುತ್ತಿದೆ. ಆ.15ರ ನಂತರ ಪಾಕ್ ಸೇನೆ 100 ನಾಗರಿಕರನ್ನು ಕೊಂದು, 150 ಮಂದಿಯನ್ನು ಅಪಹರಿಸಿದೆ. ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಬಲೂಚಿಸ್ತಾನದ ನಾಗರಿಕರಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಪಾಕ್ ಯೋಧರು ಅಲ್ಲಿನ ಜನರಿಗೆ ನೀಡುತ್ತಿರುವ ಹಿಂಸೆಯನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ಕಾರ್ಯಕರ್ತರು ಬಹಿರಂಗಗೊಳಿಸಿದರು.
ಐತಿಹಾಸಿಕ ಕೆಂಪು ಕೋಟೆ ಮೇಲೆ ಮೋದಿ ಭಾಷಣ ಮಾಡಿದ ನಂತರ ಬಲೂಚ್ ಜನರ ಮೇಲೆ ಪಾಕ್ ಸೇನೆ ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತಿದೆ. ಇಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕಾರ್ಯಕರ್ತರು ತಿಳಿಸಿರುವುದನ್ನು ದೆಹಲಿಯ ಪ್ರಮುಖ ಸುದ್ದಿವಾಹಿನಿಯೊಂದು ಬಿತ್ತರಿಸಿದೆ. ಆಗಸ್ಟ್ 15ರ ಬಳಿಕ ಪಾಕ್ ಯೋಧರು 100 ನಾಗರಿಕರನ್ನು ಕೊಂದು, 150ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸಿದೆ. ಅಲ್ಲದೆ, ಜನರಿಗೆ ಚಿತ್ರಹಿಂಸೆ ನೀಡಲು ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತಿದೆ. ಇಲ್ಲಿನ ಜನರನ್ನು ಪ್ರಾಣಿಗಳಿಗಿಂತಲೂ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ, ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
► Follow us on – Facebook / Twitter / Google+