ಮೋದಿ ಮನ್-ಕಿ-ಬಾತ್‍ನಲ್ಲಿ ಉರಿ ಅಟ್ಯಾಕ್, ಪ್ಯಾರಾಲಿಂಪಿಕ್ಸ್ ಸಾಧಕರ ಕುರಿತು ಪ್ರಸ್ತಾಪ

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ, ಸೆ.25– ಪ್ರಧಾನಿ ನರೇಂದ್ರಮೋದಿ ಇಂದು ತಮ್ಮ ಮನ್-ಕಿ-ಬಾತ್ ರೇಡಿಯೋ ಭಾಷಣದ ಮೂಲಕ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ, ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಕಾಶ್ಮೀರದ ಉರಿ ವಲಯದಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆಸಿ 18 ಯೋಧರ ಹತ್ಯೆಗೆ ಕಾರಣರಾದವರನ್ನು ಶಿಕ್ಷಿಸಿಯೇ ತೀರುವುದಾಗಿ ಮೋದಿ ದೇಶದ ಜನರಿಗೆ ವಾಗ್ದಾನ ಮಾಡಿದರು. ಉರಿ ದಾಳಿ ಬಗ್ಗೆ ದೇಶದ ಜನರಲ್ಲಿ ಸಾಕಷ್ಟು ಆಕ್ರೋಶ ಭುಗಿಲೆದ್ದಿದೆ. ಇದಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತದ ಸಾಧನೆ ಕುರಿತು ಮಾತನಾಡಿದ ಅವರು, ದೀಪಾ, ಮಲಿಕ್ ಮತ್ತು ದೇವೇಂದ್ರ ಜಾಜರಿಯಾ ಅವರು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಸಾಮಾನ್ಯ ಅಥ್ಲೆಟ್‍ಗಳ ದಾಖಲೆಗಳನ್ನು ಈ ಪ್ಯಾರಾಲಿಂಪಿಕ್ಸ್‍ಗಳು ಮುರಿದಿದ್ದಾರೆ ಎಂದು ನನಗೆ ತಿಳಿದು ಸಂತೋಷವಾಯಿತು. ಇಂದು ಪ್ಯಾರಾಲಿಂಪಿಕ್ಸ್ ಪಟುಗಳನ್ನು ಸಬಲೀಕರಣಗೊಳಿಸಲು ನನ್ನ ಸರ್ಕಾರ ಬದ್ಧವಾಗಿದೆ ಎಂದು ಮನ್-ಕಿ-ಬಾತ್ ಮೂಲಕ ಅವರು ಸಾರಿದರು. ಸ್ವಚ್ಛ ಭಾರತ್ ಅಭಿಯಾನ್ ಎರಡು ವರ್ಷ ಪೂರ್ಣಗೊಳಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ 2.48 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷ ಇನ್ನೂ 1.5 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಪ್ರಧಾನಿ ಪ್ರಕಟಿಸಿದರು.

ತ್ಯಾಜ್ಯದಿಂದ ಆರೋಗ್ಯ ಉದ್ಯಮದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ನವೋದ್ಯಮಗಳನ್ನು ಆರಂಭಿಸುವಂತೆ ಅವರು ಯುವ ಉದ್ಯಮಿಗಳಿಗೆ ಕರೆ ನೀಡಿದರು.

► Follow us on –  Facebook / Twitter  / Google+

Facebook Comments

Sri Raghav

Admin