ಮೋದಿ ಮನ್ ಕಿ ಬಾತ್ ಕೇಳಿ ಮನ್ನಾ ಆಗಿದ್ದ ಸಾಲದ ಹಣವನ್ನು ಹಿಂದಿರುಗಿಸಿದ ರೈತ..!

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ಆಗ್ರಾ,ನ.3-ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಮಾತುಗಳಿಂದ ಉತ್ತರ ಪ್ರದೇಶದ ರೈತರೊಬ್ಬರು ಪ್ರಭಾವಿತಗೊಂಡಿದ್ದು , ಸರ್ಕಾರದ ಸಾಲ ಮನ್ನಾದ ಒಂದು ಲಕ್ಷ ಹಣವನ್ನು ಮರಳಿ ಸರ್ಕಾರಕ್ಕೇ ದೇಣಿಗೆ ನೀಡಿದ್ದಾರೆ. 55 ವರ್ಷ ವಯಸ್ಸಿನ ನಿಮೇಂದ್ರ ಪಾಲ್ ಸಿಂಗ್ ಜದೌನ್ ಎಂಬುವರೇ ಇಂತಹ ಉದಾರತೆ ಮೆರೆದ ರೈತ. ನಿಮೇಂದ್ರ ಬಿಎ., ಬಿಇಡ್ ಪದವೀಧರರಾಗಿದ್ದಾರೆ. 6 ಬಿಘಾ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಇರದಲ್ಲಿ ರೈತ ನಿಮೇಂದ್ರ ಅವರ 1 ಲಕ್ಷ ರೂಪಾಯಿ ಸಾಲ ಮನ್ನಾ ಆಗಿತ್ತು. ಆದರೆ, ಈ ಸಾಲ ಮನ್ನಾದ 1 ಲಕ್ಷ ಹಣವನ್ನು ರೈತ ನಿಮೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನಕ್ಕೆ ದೇಣಿಗೆ ಕೊಟ್ಟಿದ್ದಾರೆ.
ಮೋದಿ ಮಾತು, ಬಿಲಾಲ್ ದರ್ ಪ್ರೇರಣೆ: ಸೆಪ್ಟೆಂಬರ್ 24ರಂದು ಪ್ರಸಾರವಾಗಿದ್ದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸ್ವಚ್ಛ ಭಾರತ ಅಭಿಯಾನ ಬಗ್ಗೆ ಮಾತನಾಡಿದ್ದರು. ವಿಶೇಷವಾಗಿ ಜಮ್ಮು-ಕಾಶ್ಮೀರದಲ್ಲಿ ಕೆರೆ ಸ್ವಚ್ಛತೆಯಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಿರುವ 18 ವರ್ಷದ ಬಿಲಾಲ್ ದರ್ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಬಿಲಾಲ್ ದರ್ ಕಾರ್ಯದ ಬಗ್ಗೆ ಮನ್ ಕಿ ಬಾತ್‍ಕಾರ್ಯಕ್ರಮದಲ್ಲಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಧಾನಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ತಪ್ಪದೆ ಆಲಿಸುತ್ತಿರುವ ರೈತ ನಿಮೇಂದ್ರ, ಸೆ.24ರ ಮನ್ ಕಿ ಬಾತ್ ಕಾರ್ಯಕ್ರಮವನ್ನೂ ಆಲಿಸಿದ್ದರು. ಈ ಕಾರ್ಯಕ್ರಮದ ಮೂಲಕ ಬಿಲಾಲ್ ದರ್ ಕಾರ್ಯವನ್ನು ಅರಿತ ರೈತ ನಿಮೇಂದ್ರ ತಾವು ಕೂಡ ಏನಾದ್ರೂ ಮಾಡಬೇಕೆಂದು ನಿರ್ಧರಿಸಿ, ಸಾಲ ಮನ್ನಾದ 1 ಲಕ್ಷ ರೂ. ಹಣವನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ದೇಣಿಗೆ ನೀಡಿದ್ದಾರೆ.  ತಮ್ಮ 1 ಲಕ್ಷ ರೂಪಾಯಿ ದೇಣಿಗೆ ಬಗ್ಗೆ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ರೈತ ನಿಮೇಂದ್ರ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin