ಮೋದಿ, ಸಿದ್ದು ಮೇಲೆ ಜನಾರ್ದನ ಪೂಜಾರಿ ಸಿಡಿಮಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Janardhan

ಬೆಂಗಳೂರು, ಆ.13- ಮಹದಾಯಿ ವಿವಾದ ಬಗೆಹರಿಸುವುದು ಪ್ರಧಾನಿ ನರೇಂದ್ರಮೋದಿಯವರಿಗೆ ಒಂದು ನಿಮಿಷದ ಕೆಲಸ. ಆದರೆ, ಅವರು ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್‍ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಲಿ ಎಂದು ಹೇಳಿದರು.   ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಪ್ರಕರಣವನ್ನು ನ್ಯಾಯಾಧಿಕರಣಕ್ಕೆ ಹಾಕಿ ಜನರು ಉಸಿರು ಬಿಡದಂತೆ ಮಾಡಿದ್ದೀರಿ. ರಾಜ್ಯದ ಜನತೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ಯಾವ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಿ. ಕುಡಿಯುವ ನೀರು ಮೂಲಭೂತ ಹಕ್ಕು. ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ಎಲ್ಲ ಸರ್ಕಾರಗಳ ಕರ್ತವ್ಯ. ಪ್ರಧಾನಿಯವರಿಗೆ ಈ ವಿವಾದ ಬಗೆಹರಿಸುವುದು ಕೇವಲ ಒಂದು ನಿಮಿಷದ ಕೆಲಸ. ಅದನ್ನು ಅವರು ಮಾಡಬೇಕು ಎಂದು
ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವು ಕೂಡ ಹರಿಹಾಯ್ದ ಜನಾರ್ದನ ಪೂಜಾರಿ, ಮುಖ್ಯಮಂತ್ರಿಗಳೇ ಕಾಲ ಸರಿಯಿಲ್ಲ, ಅರ್ಥ ಮಾಡಿಕೊಳ್ಳಿ. ಕಾಲ ಬದಲಾಗಿದೆ. ನೀವು ಕೂಡ ಬದಲಾಗುವ ಕಾಲ ಬಂದಿದೆ. ಮಹದಾಯಿ ವಿಚಾರದಲ್ಲಿ ಜನತೆಯ ಕಷ್ಟ ಅರ್ಥಮಾಡಿಕೊಳ್ಳಿ ಎಂದರು. ಮಹದಾಯಿ ಯೋಜನೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ. ರಾಜ್ಯದ ಸಂಸದರು, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬನ್ನಿ. ಆಗ ಸರ್ಕಾರಗಳು ಪತನವಾಗುತ್ತವೆ. ಈ ಮೂಲಕ ತಕ್ಕ ಪಾಠ ಕಲಿಸಿದಂತಾಗುತ್ತದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin