ಮೋನಿಕಾ ಗುರ್ಡೆ ಹತ್ಯೆ ಪ್ರಕರಣ : ಎಟಿಎಂ ಜಾಡು ಹಿಡಿದು ಬೆಂಗಳೂರಲ್ಲಿ ಆರೋಪಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Rape

ಬೆಂಗಳೂರು ಆ.೦9 ; ಸುಗಂಧ ದ್ರವ್ಯ ತಜ್ಞೆ ಮೋನಿಕಾ ಗುರ್ಡೆ ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಬಸವನಗುಡಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಗೋವಾದ ಪಣಜಿಯಿಂದ 10 ಕಿ.ಮೀ ದೂರದಲ್ಲಿರುವ ಸಂಗೋಲ್ಡದಲ್ಲಿ ಅಕ್ಟೋಬರ್ 6ರ ರಾತ್ರಿ ಮೋನಿಕಾಳನ್ನು ಆಕೆಯ ನಿವಾಸದಲ್ಲೇ ಕೊಲೆ ಮಾಡಲಾಗಿತ್ತು. ಮೋನಿಕಾಳ ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಗೋವಾದ ಪೊಲೀಸರು ತನಿಖೆ ನಡೆಸುತ್ತಿದ್ದು ಮೋನಿಕಾಳ ಎಟಿಎಂ ಕಾರ್ಡ್ ಅನ್ನು ಬಳಸುತ್ತಿದ್ದ ಆರೋಪಿ ರಾಜಕುಮಾರ್ ಎಂಬಾತ ಗೋವಾದಲ್ಲಿ ಎರಡು ಬಾರಿ ಹಣ ಡ್ರಾ ಮಾಡಿದ್ದು ಬಳಿಕ ಬೆಂಗಳೂರಿನ ಎಟಿಎಂವೊಂದರಲ್ಲಿ ಹಣ ಡ್ರಾ ಮಾಡಿದ್ದರಿಂದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಟನ್ ಪೇಟೆಯೊಂದರ ಲಾರ್ಡ್ಜ್ ವೊಂದರಲ್ಲಿ ವಾಸ್ತವ್ಯವಿದ್ದ ರಾಜಕುಮಾರನನ್ನು ಪೊಲೀಸರು ಬಂಧಿಸಿದ್ದಾರೆ.  ಈ ವೇಳೆ ಆರೋಪಿ ರಾಜಕುಮಾರ್ ಮೋನಿಕಾಳ ಮನೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು ಹಣಕ್ಕಾಗಿಯೇ ಮೋನಿಕಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin