ಮೌಂಟೆನ್‍ವ್ಯೂ ಪಿಯು ತಂಡಕ್ಕೆ ಬಾಲಕರ ಸಮಗ್ರತಂಡ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

CHIKKAMANGALURU

ಚಿಕ್ಕಮಗಳೂರು, ಆ.26- ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ-2016 ಬಾಲಕರ ವಿಭಾಗದ ಸಮಗ್ರ ತಂಡ ಪ್ರಶಸ್ತಿ ಮೌಂಟೆನ್‍ವ್ಯೂ ಪದವಿಪೂರ್ವಕಾಲೇಜು ತಂಡ ತನ್ನದಾಗಿಸಿಕೊಂಡಿದೆ.ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಆ.22, 23 ಮತ್ತು 24ರಂದು ತಾಲ್ಲೂಕುಮಟ್ಟದ ಪದವಿಪೂರ್ವ ಕಾಲೇಜುವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ತಾಲ್ಲೂಕಿನ 25ಕ್ಕೂಹೆಚ್ಚು ಪಿ.ಯು.ಕಾಲೇಜುಗಳ 900ಕ್ಕೂಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ವಿಜೇತ ವಿದ್ಯಾರ್ಥಿಗಳನ್ನು ಮೌಂಟೆನ್‍ವ್ಯೂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹಬೀಬಾ ಎನ್.ಪಾಷ, ಪ್ರಾಂಶುಪಾಲೆ ತಸ್ನೀಮ್‍ಫಾತೀಮಾ ಅಭಿನಂದಿಸಿದರು.
ವಿಜೇತ ವಿದ್ಯಾರ್ಥಿಗಳು ಸೆ.7ದಂದು ನಡೆಯುವ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆಗಳಿಸಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin