ಮೌಂಟ್ ಎವರೆಸ್ಟ್’ನಲ್ಲಿ ಅಮೆರಿಕ ಪರ್ವತಾರೋಹಿ ಸಾವು, ಭಾರತೀಯ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Ravikumnar--01

ಕಠ್ಮಂಡು (ನೇಪಾಳ), ಮೇ 22-ಅಮೆರಿಕದ ಪರ್ವತಾರೋಹಿಯೊಬ್ಬರು ಮೌಂಟ್ ಎವರೆಸ್ಟ್’ನಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಋತುವಿನಲ್ಲಿ ವಿಶ್ವದ ಅತ್ಯುನ್ನತ ಶಿಖರದಲ್ಲಿ ಸಂಭವಿಸಿದ ಮೂರನೇ ದುರಂತವಾಗಿದೆ. ಇನ್ನೊಂದು ಪ್ರಕರಣದಲ್ಲಿ ಭಾರತೀಯ ಪರ್ವತಾರೋಹಿ ನಾಪತ್ತೆಯಾಗಿದ್ದಾರೆ.  ಅಮೆರಿಕದ ಅಲಬಾಮ ರಾಜ್ಯದ ರೋಲ್ಯಾಂಡ್ ಇಯರ್‍ವುಡ್(50) ಮೃತ್ಯು ವಲಯ ಎಂದು ಕರೆಯಲ್ಪಡುವ 8,400 ಮೀಟರ್ ಎತ್ತರದ ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ ಎಂದು ಅವರ ಪರ್ವತಾರೋಹ ಪ್ರಾಯೋಜಕತ್ವ ವಹಿಸಿರುವ ಎವರೆಸ್ಟ್ ಪರಿವಾಸ್ ಟ್ರೆಕ್ಕಿಂಗ್ ಕಂಪನಿಯ ಮುರಾರಿ ಶರ್ಮ ತಿಳಿಸಿದ್ದಾರೆ.  ಈ ಮೃತ್ಯು ವಲಯದಲ್ಲಿ ವಾಯುವಿನ ಸಾಂದ್ರತೆ ಅತ್ಯಂತ ಕಡಿಮೆ ಇರುವ ಕಾರಣ ಪರ್ವತಾರೋಹಿಗಳು ಸಾವಿಗೀಡಾಗುವ ಸಾಧ್ಯತೆ ಹೆಚ್ಚು.ಭಾರತೀಯ ನಾಪತ್ತೆ :

ಭಾರತೀಯ ಪರ್ವತಾರೋಹಿಯೊಬ್ಬರು ಮೌಂಟ್ ಎವರೆಸ್ಟ್ ತುದಿಯಿಂದ ಇಳಿದ ಬಳಿಕ ಶನಿವಾರದಿಂದ ಹಿಮಾಲಯ ಪರ್ವತದಲ್ಲಿ ನಾಪತ್ತೆಯಾಗಿದ್ದಾರೆ. ಉತ್ತರಪ್ರದೇಶದ ಮೊರಾದಾಬಾದ್ ನಿವಾಸಿ ರವಿಕುಮಾರ್ ಪರ್ವತದ ದಕ್ಷಿಣ ಇಳಿಜಾರಿನಿಂದ ಕಣ್ಮರೆಯಾಗಿದ್ದು, ಆ ಪ್ರದೇಶದಲ್ಲಿ ಶೋಧ ಮುಂದುವರಿದಿದೆ.
ರವಿಕುಮಾರ್ ಶನಿವಾರ ಮಧ್ಯಾಹ್ನ ಎವರೆಸ್ಟ್ ಏರಿದ್ದರು. ನಂತರ ನೇಪಾಳದ ಶೆರ್ಪಾ ಗೈಡ್ ಜೊತೆ ಇಳಿಯುತ್ತಿದ್ದಾಗ ಬಾಲ್ಕನಿ ಎಂಬ ಪ್ರದೇಶದಿಂದ ನಾಪತ್ತೆಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin