ಮೌಲ್ಯಯುತ ಶಿಕ್ಷಣದಿಂದ ಸುಸ್ಥಿರ ಸಮಾಜ ನಿರ್ಮಾಣ
ಈ ಸುದ್ದಿಯನ್ನು ಶೇರ್ ಮಾಡಿ
ಚಿಕ್ಕಬಳ್ಳಾಪುರ, ಆ.9- ಸೃಜನಾತ್ಮಕ ಹಾಗೂ ಮೌಲ್ಯ ಶಿಕ್ಷಣದಿಂದ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ನ್ಯೂ ಸೆಂಟ್ರಲ್ ಆಂಗ್ಲ ಶಾಲೆ ಪ್ರಾಂಶುಪಾಲರಾದ ಕೆ.ಮಂಜುಳ ತಿಳಿಸಿದರು. ನಗರದ ತಿಮ್ಮಕ್ಕ ಲೇಔಟ್ನಲ್ಲಿನ ನ್ಯೂ ಸೆಂಟ್ರಲ್ ಆಂಗ್ಲ ಶಾಲೆ ಮಕ್ಕಳಿಗೆ ಬಿರ್ಲಾ ಸನ್ ಲೈಫ್ ಇನ್ಸುರೆನ್ಸ್ ವತಿಯಿಂದ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಅಭಿನಂದಿಸಿ ಮಾತನಾಡಿದರು.
ಮಕ್ಕಳ ಶ್ರಯೋಭಿವೃದ್ಧಿಗೆ ಸಂಘ ಸಂಸ್ಥೆಗಳ ಸಹಕಾರ ಬಹಳ ಮುಖ್ಯ ಎಂದರು.ಸನ್ ಲೈಫ್ ವಿಮಾ ಕಂಪನಿಯ ಶಾಖಾ ವ್ಯವಸ್ಥಾಪಕ ಪ್ರಕಾಶಪ್ಪ, ವಿಮಾ ಕಂಪನಿಯ ಮಾರಾಟ ಪ್ರತಿನಿಧಿ ಎನ್.ಶ್ರೀನಾಥ್ ಬಿರ್ಲಾ ವಿಮಾ ಕಂಪನಿಯ ಮಾರುಕಟ್ಟೆ ಅಭಿವೃದ್ದಿ ಅಧಿಕಾರಿ ಎನ್.ಶಿಲ್ಪ, ಕೆರನ್ ಬ್ಯೂಲಾ ಕುಮಾರಿ, ನ್ಯೂ ಸೆಂಟ್ರಲ್ ಆಂಗ್ಲ ಶಾಲೆಯ ಸಹ ಶಿಕ್ಷಕಿ ನಾಗಮಣಿ ಹಾಜರಿದ್ದರು.
Facebook Comments