ಔಟಾದ ಮ್ಯಾಚ್ ಫಿನಿಶರ್ : ವೆಸ್ಟ್ ಇಂಡೀಸ್ ವಿರುದ್ಧ 1 ರನ್ ನಿಂದ ಸೋಲು

ಈ ಸುದ್ದಿಯನ್ನು ಶೇರ್ ಮಾಡಿ

honi

ಫೋರ್ಟ್ ಲಾಡೆರ್ ಡೆಲ್, ಆ.28: ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿರುವ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಶತಕದ ದಾಖಲೆ ಬರೆದರೂ ಭಾರತ ತಂಡ ಗೆಲ್ಲಲಾಗಲಿಲ್ಲ. ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲಿ 245 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿ ಗೆದ್ದು ದಾಖಲೆ ನಿರ್ಮಿಸುವ ಅವಕಾಶವನ್ನು ಮಹೇಂದ್ರಸಿಂಗ್ ದೋನಿ ಬಳಗವು ಕೇವಲ 1 ರನ್ ನಿಂದ ಸೋಲೊಪ್ಪಿಕೊಂಡಿತು. 2015ರಲ್ಲಿ ವೆಸ್ಟ್ ಇಂಡೀಸ್ ತಂಡವು ಜೋಹಾನ್ಸ್ಬರ್ಗ್ನಲ್ಲಿ ದಕ್ಷಿಣ ಆಫ್ರಿಕಾದ ಎದುರು 236 ರನ್ಗಳ ಮೊತ್ತವನ್ನು ಬೆನ್ನತ್ತಿ ಗೆದ್ದಿತ್ತು. ಶನಿವಾರದ ಪಂದ್ಯದಲ್ಲಿ ವಿಂಡೀಸ್ನ ಆರಂಭಿಕ ಬ್ಯಾಟ್ಸ್ಮನ್ ಇವಿನ್ ಲೂಯಿಸ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ 245 ರನ್ ಗಳ ಬೃಹತ್ ಮೊತ್ತದ ಸವಾಲು ನೀಡಿತ್ತು.

ಮೊದಲಿಗೆ ಬ್ಯಾಟಿಂಗ್ ಮಾಡಿದ ವಿಂಡೀಸ್ ಪರವಾಗಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಎವಿನ್ ಲೆವಿಸ್ 100, ಜಾನ್ಸನ್ ಚಾರ್ಲ್ಸ್ 79 ರನ್ ಗಳಿಸಿದರು. ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ವಿಂಡೀಸ್ 245 ರನ್ ಗಳಿಸಿತು. ಭಾರತದ ಪರ ಜಸ್ ಪ್ರೀತ್ ಬೂಮ್ರಾ 2, ರವೀಂದ್ರ ಜಡೇಜ 2, ಶಮಿ 1 ವಿಕೆಟ್ ಗಳಿಸಿದರು. ಭಾರತದ ಪರವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡಿಗ ಕೆ.ಎಲ್.  ರಾಹುಲ್ 51 ಎಸೆತಗಳಲ್ಲಿ 110 ರನ್ ಗಳಿಸಿ ಅಜೇಯರಾಗುಳಿದರು. ಟಿ-20ಯಲ್ಲಿ ಮೊದಲ ಶತಕ ದಾಖಲಿಸಿದರು. ರೋಚಕವಾಗಿದ್ದ ಕೊನೆಯ ಓವರ್ ನಲ್ಲಿ ಭಾರತ ಗೆಲುವಿಗೆ 9 ರನ್ ಬೇಕಿತ್ತು.

ಡ್ವೇನ್ ಬ್ರಾವೋ ಕರಾರುವಕ್ಕಾಗಿ ಬೌಲಿಂಗ್ ಮಾಡಿ 7 ರನ್ ನೀಡಿದರು. ಕೊನೆಯ ಎಸೆತದಲ್ಲಿ ಭಾರತದ ಗೆಲುವಿಗೆ ಬೇಕಿದ್ದ 2 ರನ್ ಗಳಿಸಬೇಕಿತ್ತು. ಧೋನಿ ವಿನ್ನಿಂಗ್ ಶಾಟ್ ಬಾರಿಸಲಿದ್ದಾರೆ ಎಂದೇ ಕೋಟ್ಯಂತರ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಅವರು ವಿಕೆಟ್ ಒಪ್ಪಿಸುವುದರೊಂದಿಗೆ ಮಹತ್ವದ ಪಂದ್ಯದಲ್ಲಿ 1 ರನ್ ನಿಂದ ಭಾರತ ಸೋಲು ಕಂಡಿತು.

► Follow us on –  Facebook / Twitter  / Google+

Facebook Comments

Sri Raghav

Admin