ಯಡಿಯೂರಪ್ಪಗೆ ಸೆಡ್ಡು ಹೊಡೆದ ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

eshwaraPP-A

ಬೆಂಗಳೂರು, ಆ.18-ಯಾರೊಬ್ಬರೂ ಪ್ರತ್ಯೇಕವಾಗಿ ಸಭೆ ಸಮಾರಂಭವನ್ನು ನಡೆಸಬಾರದೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಆದೇಶ ನೀಡಿದ್ದರೂ ಹಿರಿಯ ಮುಖಂಡ ಕ.ಎಸ್.ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆ ನಡೆಸುವ ಮೂಲಕ ಉಭಯ ನಾಯಕರ ಶೀತಲ ಸಮರ ನಿರ್ಣಾಯಕ ಘಟ್ಟ ತಲುಪಿದೆ.  ಯಡಿಯೂರಪ್ಪನವರ ಆದೇಶ ಧಿಕ್ಕರಿಸಿ ಕೆ.ಎಸ್.ಈಶ್ವರಪ್ಪ ಇಂದು ಶಾಸಕರ ಭವನದಲ್ಲಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳ ಸಭೆಯನ್ನು ನಡೆಸುವ ಮೂಲಕ ನೇರವಾಗಿಯೇ ಸೆಡ್ಡು ಹೊಡೆದಿದ್ದಾರೆ.  ಪಕ್ಷದ ಚಿಹ್ನೆಯಡಿ ಸಭೆ ಸಮಾರಂಭಗಳನ್ನು ನಡೆಸಿದರೆ ಎಲ್ಲಾ ರೀತಿ ಸಹಕಾರ ನೀಡಲಾಗುವುದು. ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಬಾರದೆಂದು ನಿನ್ನೆಯಷ್ಟೇ ಯಡಿಯೂರಪ್ಪ ಸ್ಪಷ್ಟ ನಿರ್ದೇಶನ ನೀಡಿದ್ದರೂ ಶಾಸಕರ ಭವನದಲ್ಲಿ ಇಂದು ಮಾಜಿ ಬಿಬಿಎಂಪಿ ಮೇಯರ್ ವೆಂಕಟೇಶ್ಮೂರ್ತಿ, ಮಾಜಿ ಸಂಸದ ವಿರೂಪಾಕ್ಷಪ್ಪ, ಹಿಂದುಳಿದ ವರ್ಗಗಳ ನಾಯಕ ಮುಕುಡಪ್ಪ ಸೇರಿದಂತೆ ಮತ್ತಿತರ ಮುಖಂಡರು ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಂಗೊಳ್ಳಿರಾಯಣ್ಣ ಬ್ರಿಗೇಡ್ನ ರೂಪುರೇಷೆ, ಪದಾಧಿಕಾರಿಗಳ ನೇಮಕಾತಿ, ಜಿಲ್ಲಾ ಪ್ರವಾಸ, ಸಂಘಟನೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಸೇರಿದಂತೆ ಮತ್ತಿತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.  ಮೂಲಗಳ ಪ್ರಕಾರ ಈ ತಿಂಗಳ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಮಧ್ಯ ಕರ್ನಾಟಕದ ದಾವಣಗೆರೆ ಇಲ್ಲವೆ ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಸುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.  ಪಕ್ಷದಲ್ಲಿ ಕೇವಲ ಯಡಿಯೂರಪ್ಪಗೆ ಮಾತ್ರವಲ್ಲದೆ, ಹಿಂದುಳಿದ ವರ್ಗಗಳ ನಾಯಕರಾದ ನನಗೂ ಎಷ್ಟು ಜನರ ಬೆಂಬಲ ಇದೆ ಎಂಬುದನ್ನು ಸಾಬೀತು ಪಡಿಸುವ ಉದ್ದೇಶದಿಂದಲೇ ಸಭೆ ಆಯೋಜಿಸಲು ಮುಖಂಡರು ಒಲವು ತೋರಿರುವುದು ಸ್ಪಷ್ಟವಾಗಿದೆ. ತಾವು ನಡೆಸುತ್ತಿರುವ ಕಾರ್ಯಕ್ರಮಕ್ಕೆ ಕೇಂದ್ರ ವರಿಷ್ಠರು ಯಾವುದೇ ರೀತಿಯ ಅಡ್ಡಿಪಡಿಸುವ ಸೂಚನೆ ಇಲ್ಲವೆಂದು ಮನಗಂಡಿರುವ ಈಶ್ವರಪ್ಪ, ಯಡಿಯೂರಪ್ಪ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin