ಯಡಿಯೂರಪ್ಪ ಏನೂ ಸತ್ಯಹರಿಶ್ಚಂದ್ರ ಅಲ್ಲ : ಉಗ್ರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ugra

ಬೆಂಗಳೂರು, ಅ.28-ಕಿಕ್‍ಬ್ಯಾಕ್ ಪ್ರಕರಣದಿಂದ ಆರೋಪ ಮುಕ್ತರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಸತ್ಯಹರಿಶ್ಚಂದ್ರರಲ್ಲ, ಈ ಪ್ರಕರಣದಲ್ಲಿ ಸಿಬಿಐ ದುರ್ಬಳಕೆಯಾಗಿದೆ. ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆರೋಪ ಮಾಡಿದರು.ಪತ್ರಿಕಾ ಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆರೋಪ ಮುಕ್ತರಾಗುತ್ತಿದ್ದಂತೆ ಯಡಿಯೂರಪ್ಪ ಮತ್ತು ಬಿಜೆಪಿ ಯವರು ಸತ್ಯಹರಿಶ್ಚಂದ್ರರಂತೆ ವರ್ತಿಸುತ್ತಿದ್ದಾರೆ. ಹಾಗಾದರೆ ಪ್ರೇರಣಾ ಟ್ರಸ್ಟ್‍ಗೆ ಜಿಂದಾಲ್ ಸಂಸ್ಥೆ ನೀಡಿದ ಹಣ ಯಾವುದು? ಇದನ್ನು ಜನರ ಮುಂದೆ ಯಡಿಯೂರಪ್ಪ ಹೇಳಲಿ ಎಂದರು.

ಇತ್ತೀಚೆಗೆ ವಿಧಾನಸೌಧದ ಬಳಿ ದೊರೆತ ಎರಡು ಕೋಟಿ ಹಣ ಎಲ್ಲಿಗೆ ಮುಟ್ಟುತ್ತಿತ್ತು ಎಂಬುದರ ಬಗ್ಗೆ ಎಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾದರೆ ಸತ್ಯಾಂಶ ಹೊರ ಬೀಳುತ್ತದೆ. 20ಲಕ್ಷ ರೂ. ಕೊಟ್ಟು ಜಾಗ ಪಡೆದು 20 ಕೋಟಿಗೆ ಮಾರಾಟ ಮಾಡಿದ್ದೀರಿ. ಅಧಿಕಾರದಲ್ಲಿಲ್ಲದಾಗ ನಿಮ್ಮ ಆಸ್ತಿ ಎಷ್ಟಿತ್ತು? ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾದಾಗ ನೂರಾರು ಕೋಟಿಗೆ ಹೇಗೆ ಏರಿಕೆಯಾಯಿತು. ಇದನ್ನು ಜನರಿಗೆ ತಿಳಿಸಿ ಎಂದು ಹೇಳಿದರು.ಬಿಎಸ್‍ವೈ ಅವಧಿಯಲ್ಲಿ ಒಂದು ಲಕ್ಷ ಕೋಟಿಯಷ್ಟು ಮೌಲ್ಯದ ಅದಿರು ಲೂಟಿಯಾಗಿದೆ. ಈ ಬಗ್ಗೆ ಪ್ರಾಥಮಿಕ ಸಾಕ್ಷಿಗಳಿವೆ ಎಂದು ಸಿಬಿಐ ಅಧಿಕಾರಿಗಳೇ ಹೇಳಿದ್ದರು. ಅಂತಿಮ ಹಂತದಲ್ಲಿ ಈ ಕೇಸು ಹೇಗೆ ವಜಾ ಆಯಿತು ಎಂದು ಅಂತ ಸಿಬಿಐ ಹಾಗೂ ಯಡಿಯೂರಪ್ಪನವರೇ ಹೇಳಬೇಕು ಎಂದು ಉಗ್ರಪ್ಪ ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin