ಯಡಿಯೂರಪ್ಪ ಭ್ರಷ್ಟಾಚಾರದ ಜನಕ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು, ಆ.23- ಕರ್ನಾಟಕದಲ್ಲಿ ಆಪರೇಷನ್ ಕಮಲದಂತಹ ಅನಿಷ್ಟ ಪದ್ಧತಿಯನ್ನು ಸೃಷ್ಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಭ್ರಷ್ಟಾಚಾರದ ಜನಕ ಎಂದು ಕಾಂಗ್ರೆಸ್ ಆರೋಪಿಸಿದೆ. ಬಸವನಗುಡಿಯ ಗಾಂಧಿಬಜಾರ್‍ನಲ್ಲಿ ಹಮ್ಮಿಕೊಂಡಿದ್ದ ಯಡಿಯೂರಪ್ಪ ವಿರುದ್ಧದ ಬೃಹತ್ ಪಂಜಿನ ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಶಿಷ್ಟಾಚಾರ ವಿಭಾಗದ ಮುಖ್ಯಸ್ಥ ಎಸ್.ಇ.ಸುಧೀಂದ್ರ ಅವರು, ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಮೇಲಿನ ಆರೋಪಗಳ ಕುರಿತು ಎಸಿಬಿಗೆ ಉತ್ತರಿಸಬೇಕಾದ ಯಡಿಯೂರಪ್ಪ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಫಲಾಯನವಾದ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಸಿ4 ಸಂಸ್ಥೆ ಸಮೀಕ್ಷೆಯಿಂದ ಬಿಜೆಪಿ ದಿಲ್ಲಿ ನಾಯಕರು ದಿಗಿಲುಗೊಂಡಿದ್ದು, ತುಟಿಕ್‍ಪಿಟಿಕ್ ಎನ್ನುತ್ತಿಲ್ಲ. ಭ್ರಷ್ಟಾಚಾರವನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯವರಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಾಲಾಜಿ ತಿಮ್ಲಾಪುರ ಆರೋಪಿಸಿದರು. ಎನ್‍ಎಸ್‍ಯುಐ ಬೆಂಗಳೂರು ಘಟಕದ ಉಪಾಧ್ಯಕ್ಷ ದೀಪಕ್‍ಗೌಡ ಮಾತನಾಡಿ, ಕಲ್ಲಡ್ಕ ಅವರನ್ನು ಬಂಧಿಸಿದರೆ ರಾಜ್ಯಕ್ಕೆ ಬೆಂಕಿ ಬೀಳುತ್ತದೆ ಎಂದು ಹೇಳಿಕೆ ನೀಡುವ ಬಿಎಸ್‍ವೈ ನಂಥವರು ಶಾಂತಿಪ್ರಿಯ ಕರ್ನಾಟಕಕ್ಕೆ ಬೇಕಿಲ್ಲ ಎಂದು ಕಿಡಿಕಾರಿದರು.

Facebook Comments

Sri Raghav

Admin