ಯಡಿಯೂರಪ್ಪ ವಿರುದ್ಧ ಮಹದೇವಪ್ಪ ಲೇವಡಿ

ಈ ಸುದ್ದಿಯನ್ನು ಶೇರ್ ಮಾಡಿ

HC-Mahadevappa
ತಿ.ನರಸೀಪುರ, ಏ.26-ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ವಿಜಯೇಂದ್ರರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದಿರುವುದು ಪಕ್ಷದಲ್ಲಿ ಅವರಿಗೆ ಇರುವ ಸ್ಥಾನಮಾನವನ್ನು ತೋರುತ್ತದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬಿ.ಎಸ್.ಯಡಿಯೂರಪ್ಪರವರನ್ನು ಲೇವಡಿ ಮಾಡಿದರು.
ತಾಲ್ಲೂಕಿನ ಮೂಗೂರು ಹೋಬಳಿಯ ಕುರುಬೂರು, ಮಾಡ್ರಹಳ್ಳಿ, ಕೊತ್ತೇಗಾಲ ಗ್ರಾಮಗಳ ಮನೆಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿದ್ದು, ಬಿಜೆಪಿ ಪಕ್ಷದ ಆಂತರಿಕ ಕಿತ್ತಾಟದಿಂದ ಅದೂ ಕೂಡ ಹೆಚ್ಚಿನ ಸ್ಥಾನ ಪಡೆಯುವುದಿಲ್ಲ ಎಂದರು.

ಈ ಬಾರಿ ಕಾಂಗ್ರೇಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲಿದ್ದು, ಅತಂತ್ರ ವಿಧಾನಸಭೈ ನಿರ್ಮಾಣವಾಗುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಜಿ.ಪಂ ಸದಸ್ಯ ಟಿ.ಎಚ್.ಮಂಜುನಾಥ್, ಮಾಜಿ ಸದಸ್ಯೆ ಸುಧಾಮಹದೇವಯ್ಯ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಾಡ್ರಹಳ್ಳಿ ಶಿವಮೂರ್ತಿ, ಪುರಸಭೈ ಸದಸ್ಯ ರಾಘವೇಂದ್ರ, ಕೆ.ಜಿ.ವೀರಣ್ಣ, ಕೇತಹಳ್ಳಿ ಸಿದ್ದಶೆಟ್ಟಿ, ಗ್ರಾ.ಪಂ ಸದಸ್ಯ ಎಂ.ಬಿ.ಸಾಗರ್, ಹಿರಿಯೂರು ನವೀನ್, ಲತಾ ಜಗದೀಶ್, ಕಲಿಯೂರು ಶಿವಣ್ಣ ಪಿಎ ಬಸವರಾಜು, ಸಿದ್ದೇಗೌಡ, ನಂಜಮ್ಮಣಿ ಇತರರು ಇದ್ದರು.

Facebook Comments

Sri Raghav

Admin